ಮಂಗಳೂರು : ಇನ್ಮುಂದೆ ತಲ್ವಾರ್ ಹಿಡಿದ 50 ಮಂದಿ ಶ್ರೀರಾಮ ಸೇನೆಯ ಕಾರ್ಯಕರ್ತರು ಹಿಂದೂ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಗಳಿಗೆ ರಕ್ಷಣೆ ನೀಡಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.
ಗಣಪತಿ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಮಟ್ಟಕ್ಕೆ ಜಿಹಾದಿಗಳ ಉಪಟಳ ಬಂದು ನಿಂತಿದೆ. ಹೀಗಾಗಿ ಶಸ್ತ್ರಸಜ್ಜಿತವಾಗಿ ಶ್ರೀರಾಮ ಸೇನೆಯ ಕಾರ್ಯಕರ್ತರೇ ರಕ್ಷಣೆ ನೀಡಲಿದ್ದಾರೆ.
ಜಿಹಾದಿಗಳ ಬೆನ್ನಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿಂತಿದ್ದು, ಜಿಹಾದಿ ಗೂಂಡಾವರ್ತನೆ ತಡೆಯಲು ಸರ್ಕಾರ ವಿಫಲವಾಗಿದೆ. ಈ ಕೂಡಲೇ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಲಿ ಎಂದು ಕುಲಕರ್ಣಿ ಆಗ್ರಹಿಸಿದ್ದಾರೆ.
Ad