ಮಂಗಳೂರು: ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ತಡವಾಗಿ ಭೇಟಿ ನೀಡಿದ್ದು, ಜನರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಾಣಾಲಿನಲ್ಲಿ ನಡೆದಿದೆ.
ಸ್ವಕ್ಷೇತ್ರದ ಜನರೊಂದಿಗೆಯೇ ಶಾಸಕ ಹರೀಶ್ ಪೂಂಜ ಕಿರಿಕ್ ಮಾಡಿದ್ದಾರೆ. ಎಂಎಲ್ಎ ಗೆ ಯಾಕೆ ತಡವಾಗಿ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ, ಆ ತರ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದ ಹರೀಶ್ ಪೂಂಜ ಹೇಳಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನಡವಳಿಕೆಗೆ ಗ್ರಾಮದ ಜನರು ಕೆಂಡಾ ಮಂಡಲವಾಗಿದ್ದಾರೆ. ತೀವ್ರ ಮಳೆ ಹಾನಿ ಸಂದರ್ಭ ಕ್ಷೇತ್ರದಲ್ಲಿ ಶಾಸಕರು ಜನರು ಕುಂದು ಕೊರತೆ ಆಲಿಸದೆ ಮಳೆ ಕಡಿಮೆಯಾದ ಬಳಿಕ ಸವಾಣಾಲಿನ ಮಳೆ ಹಾನಿ ಪ್ರದೇಶಕ್ಕೆ ಶಾಸಕನ ಭೇಟಿ ನೀಡಿದ್ದಾರೆ.
ಈ ಹೊತ್ತಲ್ಲಿ ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕನ ವರ್ತನೆಗೆ ಗ್ರಾಮಸ್ಥರು ಇನ್ನಷ್ಟು ಕೆರಳಿದ್ದಾರೆ. ಶಾಸಕನ ಮೇಲೆ ಬೆಳ್ತಂಗಡಿ ತಾಲೂಕಿನ ಸವಾಣಾಲ್ ಗ್ರಾಮಸ್ಥರು ಮುಗಿ ಬಿದ್ದಿದ್ದಾರೆ. ಪ್ರಶ್ನೆ ಮಾಡಿದವರಿಗೆ ನಾಯಿ ಎಂದು ಅವಾಚ್ಯವಾಗಿ ಪೂಂಜ ನಿಂದಿಸಿದ್ದಾರೆ. ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿ ನಡೆದಿದೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಶಾಸಕ ಪೂಂಜ ಸ್ಥಳದಿಂದ ಹೊರಟಿದ್ದಾರೆ.