Bengaluru 23°C
Ad

ಬೋಂದೆಲ್ ನಲ್ಲಿ ನವೀಕೃತ ನೂತನ ಚರ್ಚ್ನ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ

ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಬೋಂದೆಲ್ ಮಂಗಳೂರು ದೇವಾಲಯದ ಶತಮಾನೋತ್ಸವ ಮತ್ತು ನವೀಕೃತ ನೂತನ ಚರ್ಚ್ನ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಮೇರಿಹಿಲ್ನ ಮೌಂಟ್ ಕಾರ್ಮೆಲ್ ಶಾಲಾ ಆವರಣದಿಂದ ಬೋಂದೆಲ್ ಚರ್ಚ್ ವರೆಗೆ ನಡೆಯಿತು.

ಮಂಗಳೂರು: ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಬೋಂದೆಲ್ ಮಂಗಳೂರು ದೇವಾಲಯದ ಶತಮಾನೋತ್ಸವ ಮತ್ತು ನವೀಕೃತ ನೂತನ ಚರ್ಚ್ನ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಮೇರಿಹಿಲ್ನ ಮೌಂಟ್ ಕಾರ್ಮೆಲ್ ಶಾಲಾ ಆವರಣದಿಂದ ಬೋಂದೆಲ್ ಚರ್ಚ್ ವರೆಗೆ ನಡೆಯಿತು.

Ad

ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಚಾಲನೆ ನೀಡಿದರು, ಈ ಆಶೀರ್ವಚನ ಕಾರ್ಯವನ್ನು ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲಾ ಫಾ. ಪೀಟರ್ ಗೊನ್ಸಾಲ್ವಿಸ್ ನಡೆಸಿದರೆ, ಸಂತ ಲಾರೆನ್ಸ್ ಚರ್ಚ್ ನ ಪ್ರಧಾನ ಧರ್ಮ ಗುರು ಫಾ‌. ಆ್ಯಂಡ್ರೂ ಲಿಯೋ ಡಿಸೋಜ ಹೊರೆಕಾಣಿಗಳಿಗೆ ಪವಿತ್ರ ನೀರು ಸಿಂಪಡಣೆ ನೆರವೇರಿಸಿದರು.

Ad

ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವಲಯದ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಬೆಥರಾಂ ಫಾರ್ಮೇಶನ್ ಹೌಸ್ ಸುಪೀರಿಯರ್ ಫಾ. ಅರುಣ್, ಪ್ರೆಸೆಂಟೇಶನ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀಲಾ, ಮೌಂಟ್ ಕಾರ್ಮೆಲ್ ಸ್ಕೂಲ್ ಪ್ರಾಂಶುಪಾಲೆ ಸಿಸ್ಟರ್ ಮೆಲಿಸಾ, ಸಂತ ಲಾರೆನ್ಸ್ ಚರ್ಚ್ ಸಹಾಯಕ ಧರ್ಮಗುರು ಫಾ‌. ವಿಲಿಯಂ ಡಿಸೋಜ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜಾನ್ ಡಿಸಿಲ್ವ, ಕಾರ್ಯದರ್ಶಿ ಸಂತೋಷ್ ಮಿಸ್ಕಿತ್, ಕಾಂಗ್ರೆಸ್ ಮುಖಂಡ ಎಂಜಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023