Bengaluru 22°C
Ad

ಟಯರ್ ಬ್ಲಾಸ್ಟ್ ಆಗಿ ಗೂಡ್ಸ್ ವಾಹನ ಪಲ್ಟಿ: ಮೂವರಿಗೆ ಗಾಯ

ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ.

ಪಡುಬಿದ್ರಿ: ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ.

Ad

ಬ (3)

ಕಾವೂರಿನಿಂದ ಕಟಪಾಡಿಗೆ ಸೆಂಟ್ರಿಗ್ ಪರಿಕರಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಹಳೆ ಟಯರ್ ಬ್ಲಾಸ್ಟ್ ಆಗಿ ಎರ್ಮಾಳು ಬುದ್ದಗಿ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಗೆ ಉರುಳಿ ಬಿದ್ದಿದೆ.

Ad

ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ನಡೆಯಲಿದ್ದ ಬಾರೀ ದುರಂತ ತಪ್ಪಿದಂತಾಗಿದೆ.ಘಟನೆಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಸಂಚಾರಿ ಪೊಲೀಸರು ಸುಸೂತ್ರಗೊಳಿಸಿದರು.

Ad
Ad
Ad
Nk Channel Final 21 09 2023