Bengaluru 25°C
Ad

ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು, ಕೇರಳದ ಲಾಬಿಗೆ ಮಣಿದ ದಕ್ಷಿಣ ರೈಲ್ವೇ ಅಧಿಕಾರಿಗಳು

ನಿಲ್ದಾಣ ದಲ್ಲಿ 2 ಹೆಚ್ಚುವರಿ ಪ್ಲಾಟ್ಫಾರ್ಮ್ಗಳು ಸೇರ್ಪಡೆ ಯೇನೋ ಇದೆ ಬೆಂಗಳೂರು, ಮುಂಬಯಿಯ ರೈಲುಗಳು ಇಲ್ಲಿಗೆ ವಿಸ್ತರಣೆಯಾಗದ ಕಾರಣ ರಾಜ್ಯದ ಹಿತಾಸಕ್ತಿಯನ್ನು ದಕ್ಷಿಣ ರೈಲ್ವೇ ಮತ್ತೆ ಅವಗಣಿ ಸಿದೆ ಎಂಬ ಸಂದೇಹ ಉದ್ಭವಿಸಿದೆ.

ಮಂಗಳೂರು: ನಿಲ್ದಾಣ ದಲ್ಲಿ 2 ಹೆಚ್ಚುವರಿ ಪ್ಲಾಟ್ಫಾರ್ಮ್ಗಳು ಸೇರ್ಪಡೆ ಯೇನೋ ಇದೆ ಬೆಂಗಳೂರು, ಮುಂಬಯಿಯ ರೈಲುಗಳು ಇಲ್ಲಿಗೆ ವಿಸ್ತರಣೆಯಾಗದ ಕಾರಣ ರಾಜ್ಯದ ಹಿತಾಸಕ್ತಿಯನ್ನು ದಕ್ಷಿಣ ರೈಲ್ವೇ ಮತ್ತೆ ಅವಗಣಿ ಸಿದೆ ಎಂಬ ಸಂದೇಹ ಉದ್ಭವಿಸಿದೆ.

Ad

ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರು ಸೆಂಟ್ರಲ್ ನಿಲ್ದಾಣದ ನಂ. 4 ಮತ್ತು 5 ಪ್ಲಾಟ್‌ಫಾರ್ಮ್ ಗಳು ಪೂರ್ಣಗೊಂಡಾಗ ಈ 18 ಬೆಂಗಳೂರು, ಮುಂಬಯಿಯ ರೈಲುಗಳು ವಿಸ್ತರಣೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ರೈಲ್ವೇ ಯಾತ್ರಿ ಸಂಘಟನೆಗಳು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ದಕ್ಷಿಣ ರೈಲ್ವೇ ಅಧಿಕಾರಿಗಳು.

Ad

ಮ

ರೈಲ್ವೇ ಮಂಡಳಿಗೆ ಈ ರೈಲನ್ನು ವಿಸ್ತರಿಸುವಂತೆ 2024ರ ಫೆ. 27ರಂದು ಪತ್ರ ಬರೆದಿದ್ದರು. ಸಂಸದ ಕ್ಯಾ । ಬ್ರಿಜೇಶ್ ಚೌಟ ಕೆಲವು ತಿಂಗಳ ಹಿಂದೆ ರೈಲ್ವೇ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಸದ್ಯ ಯಶವಂತಪುರ- ಮಂಗಳೂರು,

Ad

ಜಂಕ್ಷನ್-ಯಶವಂತಪುರ ಮಧ್ಯೆ ವಾರಕ್ಕೆ ಮೂರು ಬಾರಿ ಸಂಚರಿಸುವ ನಂ. 16575/76 ಗೋಮಟೇಶ್ವರ ಎಕ್ಸ್‌ಪ್ರೆಸ್ ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದರು. ಆದರೆ ಜೂನ್ 3 ರಂದು ಇದೇ ಅಧಿಕಾರಿಗಳು, ವಿಸ್ತರಣೆಯ ಪ್ರಸ್ತಾವನೆ ಯನ್ನು ರದ್ದುಪಡಿಸುವಂತೆ ದಕ್ಷಿಣ ರೈಲ್ವೇ ಮಂಡಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.

Ad

ಕಾರಣವೇನು? ಫೆಬ್ರವರಿಯಲ್ಲಿ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆಗೊಂಡ ಆಗಿನ ಕಾಸರಗೋಡು – ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿಗೆ ವಿಸ್ತರಿಸಿರುವುದು ಹಾಗೂ ಮುಂದಿನ ದಿನಗಳಲ್ಲಿ ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವುದರಿಂದ ಗೋಮಟೇಶ್ವರ ವಿಸ್ತರಣೆ ಅಸಾಧ್ಯ ಎಂಬುದು ಅಧಿಕಾರಿಗಳ ವಾದ.

Ad
Ad
Ad
Nk Channel Final 21 09 2023