ಮಂಗಳೂರು: ವಿಶ್ವ ದೃಷ್ಟಿ ದಿನದ ಅಂಗವಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ , ಪ್ರಸಾದ್ ನೇತ್ರಾಲಯ ಮಂಗಳೂರು, ಆನ್ಸೈಟ್ ಎಸ್ಸಿಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಮತ್ತು ಸೆಂಚುರಿ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಶ್ರೀರಾಮ ಭಜನಾ ಮಂದಿರ (ರಿ) ಕೊಂಚಾಡಿ ದೇರೆಬೈಲು ಶ್ರೀಮತಿ ಲಕ್ಮಿ ಮತ್ತು ಶ್ರೀ ಶೇಷಪ್ಪ ದೇವಾಡಿಗ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರ ದಾನ ಸಂಕಲ್ಪ ನೋಂದಣಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನು ದ ಕ ಜಿಲ್ಲೆ ವಿಶೇಷ ಚೇತನರ ಹಾಗು ಸಬಲೀಕರಣ ಇಲಾಕೆ MRW ಶ್ರೀ ಜಯಪ್ರಕಾಶ್ ಅವರು ಉದ್ಘಾಟಿಸಿ ನೇತ್ರ ದಾನದ ಅಗತ್ಯತೆಯನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಕ್ಷಮ ದ ಕ ಜಿಲ್ಲಾ ಘಟಕ ಅಧ್ಯಕ್ಷ ಶ್ರೀ ರಾಜಶೇಖರ ಭಟ್ ಕಾಕುಂಜೇ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳನ್ನು ಅಲ್ಲದೆ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರ ದಾನದ ಅರಿವನ್ನು ತಿಳಿಸಿದರು.
ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾಕ್ಟರ್ ಶೀತಲ್ ನೇತ್ರ ದಾನದ ವಿಧಿ ವಿಧಾನಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಸಕ್ಷಮ ದ ಕದ ಪ್ರಭಾವದಿಂದ ಪ್ರೇರಣೆಗೊಂಡು ನೇತ್ರ ದಾನ ಮಾಡಿದ ಶ್ರೀ ಕೃಷ್ಣಮೂರ್ತಿ ಅಡಿಗ ಅವರ ಕುಟುಂಬದವರನ್ನು ದಾನಮಾನ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಮ ಭಜನಾ ಮಂದಿರದ ಅಧ್ಯಕ್ಷ ಶ್ರೀ ವಿಜಯ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ಶ್ರೀ ರಾಜೇಶ್, ವಿಕಾಸಂ ಫೌಂಡೇಶನ್ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಭಾಸ್ಕರ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ ಶ್ರೀ ನಾರಾಯಣ ಕಂಜರ್ಪನೆ , ಸಕ್ಷಮ ದ ಕ ದ ಖಜಾಂಜಿ ಶ್ರೀ ಸತೀಶ್ ರಾವ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಕ್ಷಮ ದ ಕದ ಕಾರ್ಯದರ್ಶಿ ಶ್ರೀ ಹರೀಶ್ ಪ್ರಭು ನಿರೂಪಿಸಿ ಧನ್ಯವಾದ ಮಾಡಿದರು.
ಪ್ರಾರ್ಥನೆಯನ್ನು ಕುಮಾರಿ ಅನುಷಾ ಕಾಕುಂಜೆ ಮತ್ತು ಸಕ್ಷಮ ಗೀತೆಯನ್ನು ಶ್ರೀಮತಿ ಗೀತಾ ಲಕ್ಷ್ಮೀಶ ಅವರು ಮಾಡಿದರು. ದಾನಮಾನ ಪತ್ರವನ್ನು ಶ್ರೀ ಭಾಸ್ಕರ್ ಹೊಸಮನೆ ವಾಚಿಸಿದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನ ಉಚಿತ ನೇತ್ರ ತಪಾಸಣೆಯ ಸೌಲಭ್ಯವನ್ನು ಪಡಕೊಂಡರು. ಅಲ್ಲದೆ 24 ಜನ ನೇತ್ರ ದಾನದ ಸಂಕಲ್ಪವನ್ನು ಕೈಕೊಂಡರು. ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ನೀಡುಗಳ ಸುಬ್ರಹ್ಮಣ್ಯ ಭಟ್ ಪ್ರಥಮ ನೇತ್ರದಾನದ ಸಂಕಲ್ಪವನ್ನು ಕೈಕೊಂಡರು. ನೇತ್ರ ದಾನ ಸಂಕಲ್ಪ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರವನ್ನು ಪ್ರಸಾದ್ ನೇತ್ರಾಲಯದಿಂದ ವಿತರಿಸಲಾಯಿತು.
ಅರ್ಹ ವ್ಯಕ್ತಿಗಳಿಗೆ ಉಚಿತ, ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಅದಲ್ಲದೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಲಾಯಿತು.