ಬಂಟ್ವಾಳ: ಸರಪಾಡಿ ಮುಂಚಿಕಾಡು ಅಲ್ಬುಕರ್ಕ್ ಎಸ್ಟೇಟ್ ನ ರಬ್ಬರ್ ತೋಟಕ್ಕೆ ವಿದ್ಯುತ್ ಟಾನ್ಸ್ ಫಾರ್ಮರ್ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೆಂಕಿ ಬಿದ್ದು ಸುಮಾರು ಅರ್ಧ ಎಕರೆ ಪ್ರದೇಶದ ಮರ ಗಿಡಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ರಬ್ಬರ್ ಮರಗಳು ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ.