Ad

ಪ್ರಸಿದ್ದ ಕದ್ರಿ ಕ್ಷೇತ್ರದಲ್ಲಿ ಯುವಕನೊಬ್ಬನ ಹುಚ್ಚಾಟ : ದಂಗಾಗಿ ನಿಂತ ಭಕ್ತಸಮೂಹ

ಪ್ರಸಿದ್ದ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥನಸನ್ನಿಧಿಯಲ್ಲಿ ಯುವಕನೊಬ್ಬನ ಹುಚ್ಚಾಟಕ್ಕೆ ಇಡೀ ಭಕ್ತಸಮೂಹವೇ ದಂಗಾಗಿ ಹೋದ ಪ್ರಸಂಗ ಮಂಗಳವಾರಮುಂಜಾನೆ ನಡೆದಿದೆ.

ಮಂಗಳೂರು/ಕದ್ರಿ:  ಪ್ರಸಿದ್ದ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥನಸನ್ನಿಧಿಯಲ್ಲಿ ಯುವಕನೊಬ್ಬನ ಹುಚ್ಚಾಟಕ್ಕೆ ಇಡೀ ಭಕ್ತಸಮೂಹವೇ ದಂಗಾಗಿ ಹೋದ ಪ್ರಸಂಗ ಮಂಗಳವಾರಮುಂಜಾನೆ ನ ಡೆದಿದೆ.

Ad
300x250 2

ಬೈಕ್ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣಪ್ರವೇಶಿಸಿದ ಯುವಕ  ದೇವಸ್ಥಾನದ ಒಳಗೆ ಪ್ರವೇಶ ಮಾಡಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ  ಮುಂದೆ ಹೋಗಿ ಕಾಲಿನಿಂದಬಾಗಿಲು ಒದ್ದು ಅಪಚಾರ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅರ್ಚಕರಮೇಲೂ ಹಲ್ಲೆ ನಡೆಸಿ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟನಡೆಸಿದ್ದಾನೆ ಎಂದು ತಿಳಿದು ಬಂದಿದೆ ನಂತರ ದೇವಸ್ಥಾನದ ಮುಂಭಾಗದ ಮಂಟಪದ ಮೇಲೇರಿಮಂಟಪದ ಛಾವಣಿಗೂ ಹಾನಿ ಮಾಡಿದ್ದು, ಈತನ ಹುಚ್ಚಾಟದಿಂದಅಲ್ಲಿ ಸೇರಿದ್ದ ಅರ್ಚಕರು ಹಾಗೂ ಭಕ್ತರು ಗಾಭರಿಗೊಂಡಿದ್ದಾರೆ.

ದಾಂದಲೆ ನಡೆಸಿದ ಯುವಕನನ್ನು ಕೊನೆಗೂ ಸೇರಿದ ಜನರುಹಗ್ಗದಿಂದ ಕಟ್ಟಿಹಾಕಿದ್ದಾರೆ.  ಬಳಿಕ ಯುವಕನನ್ನು ಪೊಲೀಸರವಶಕ್ಕೆ ಒಪ್ಪಿಸಲಾಗಿದೆ.  ಆ ಯುವಕನ ಮಾಹಿತಿ ಸದ್ಯ ಲಭ್ಯವಾಗಿಲ್ಲ,ಪೊಲೀಸರ ವಿಚಾರಣೆಯ ಬಳಿಕ ಸಮರ್ಪಕ ಮಾಹಿತಿ ಸಿಗಲಿದೆ.  ಯುವಕನ ರಂಪಾಟದ ಕಾರಣದಿಂದ ದೇವರಿಗೆ ಮುಂಜಾನೆ ನಡೆಯಬೇಕಾಗಿದ್ದ ಪೂಜೆ ನೆರವೇರಿಸಲಾಗಿಲ್ಲ  ಎಂಬುದು ಬೇಸರ ವಿಷಯವಾಗಿದೆ.

Ad
Ad
Nk Channel Final 21 09 2023
Ad