ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಆರಂಭಿಸಿದ ಲೋಕಮಾನ್ಯ ತಿಲಕ್ ಟಿ (ಮುಂಬೈ)-ಕೊಚುವೆಲಿ (ತಿರುವನಂತಪುರ) ಸಾಪ್ತಾಹಿಕ ಸ್ಪೆಷಲ್ (01463) ರೈಲನ್ನು ನ.21ರ ತನಕ ಹಾಗೂ ಕೊಚುವೆಲಿ-ಲೋಕಮಾನ್ಯ ತಿಲಕ್ (ಟಿ) ಸಾಪ್ತಾಹಿಕ ಸ್ಪೆಷಲ್ (01464) ರೈಲನ್ನು ನವೆಂಬರ್ 23 ತನಕ ವಿಸ್ತರಿಸಲಾಗಿದೆ.
Ad
ಈ ರೈಲು ಮಂಗಳೂರು ಜಂಕ್ಷನ್ ಮೂಲಕ ಪ್ರಯಾಣಿಸಲಿದೆ. ರೈಲು ಆರಂಭಿಸುವ ಸಂದರ್ಭ ಕ್ರಮವಾಗಿ ನ.14 ಮತ್ತು 15ರ ತನಕ ಸಂಚರಿಸಲು ನಿರ್ಧರಿಸಲಾಗಿತ್ತು. ಆದರೆ ಪ್ರಯಾಣಿಕರ ಬೇಡಿಕೆಯಂತೆ ಉಭಯ ಕಡೆಗಳಿಂದ ರೈಲುಗಳ ತಲಾ ಒಂದು ಪ್ರಯಾಣ ಟ್ರಿಪ್ ಹೆಚ್ಚು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Ad
Ad