Bengaluru 23°C
Ad

ವಿದ್ಯುತ್ ತಂತಿ ಆಕಸ್ಮಿಕವಾಗಿ ಸ್ಪರ್ಶಿಸಿ ಎಲೆಕ್ಟ್ರಿಷಿಯನ್ ಮೃತ್ಯು

ವಿದ್ಯುತ್ ಸ್ಪರ್ಶಿಸಿ ಎಲೆಕ್ಟ್ರಿಷಿಯನ್ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಮಂಗಳೂರು: ವಿದ್ಯುತ್ ಸ್ಪರ್ಶಿಸಿ ಎಲೆಕ್ಟ್ರಿಷಿಯನ್ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಉಳಿ ಗ್ರಾಮದ ದೇವದಾಸ್ (35) ಮೃತ ವ್ಯಕ್ತಿ. ಉರ್ಕುಂಜ ನಿವಾಸಿ ಬೇಬಿ ಎಂಬುವರ ಮನೆಯೊಂದರಲ್ಲಿ ದೇವದಾಸ್‌ ವಿದ್ಯುತ್ ತಂತಿ ಹಾಕುವ ಕೆಲಸ ಮಾಡುತ್ತಿದ್ದರು. ದೇವದಾಸ್ ಅವರು ಮನೆಯ ಹೊರಗಿನ ಮುಖ್ಯ ಸ್ವಿಚ್ ಬೋರ್ಡ್ ಬಳಿ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಯ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ದೇವದಾಸ್ ಅವರ ತಂದೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad
Ad
Nk Channel Final 21 09 2023