Bengaluru 28°C
Ad

ಮಾದಕ ವಸ್ತು ಸಾಗಾಟ ಮತ್ತು ಮಾರಾಟ : ಅಂತರ್ ರಾಜ್ಯ ಆರೋಪಿಗಳ ಸೆರೆ

ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ  ಎಲ್‌ಎಸ್‌ಡಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತುಕಾರನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು : ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ  ಎಲ್‌ಎಸ್‌ಡಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತುಕಾರನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ತಮ್ಮಲ್ಲಿ ಮಾದಕ ವಸ್ತುವಾದ ಎಲ್‌ಎಸ್‌ಡಿ ಯನ್ನುಇರಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಾ ಕಾರಿನಲ್ಲಿ ಸುತ್ತಾಡುತ್ತಿದ್ದಾರೆಂದು ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಅನಿತಾ ಹೆಚ್.ಬಿ ರವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀ ಶ್ರೀಕಾಂತ್ ಕೆ ರವರ ನಿರ್ದೆಶನದಂತೆ ಶ್ರೀಮತಿ ಅನಿತಾ ಹೆಚ್.ಬಿ ,ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಗಳ ಜೊತೆ ದಿನಾಂಕ: 08-10-2024 ರಂದು ಬೆಳಿಗ್ಗೆ 09-15 ಗಂಟೆಗೆ ಹಳೆಯಂಗಡಿ ಗ್ರಾಮದ ಕೊಪ್ಪಳ ಸೇತುವೆ ಬಳಿ ಆರೋಪಿತರಾದ ೧) ಆದಿಲ್, ೨) ಮಹಮ್ಮದ್ ನಿಹಾಲ್ ಎಂ.ಪಿ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿತರ ವಶದಲ್ಲಿದ್ದ ವಾಣಿಜ್ಯ ಪ್ರಮಾಣದ ಸುಮಾರು 78 ಸಾವಿರ ಮೌಲ್ಯದ ಒಟ್ಟು 26ಎಲ್‌ಎಸ್‌ಡಿ  ಸ್ಟಾರ್ ಸ್ಟಿçಪ್ಸ್ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಆರೋಪಿತರು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಕೆಎಲ್-೦೧-ಸಿ.ಟಿ-೪೪೭೬
ನಂಬ್ರದ ಕಾರಿನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದ್ದು, ಆರೋಪಿತರ ವಶದಿಂದ ಮಾದಕ ವಸ್ತುವಾದ ೨೬ ಐSಆ ಸ್ಟಾರ್ ಸ್ಟಿçಪ್ಸ್ಗಳನ್ನು
ಹಾಗೂ 2 ಆಪಲ್ ಐ ಫೋನ್ ಮೊಬೈಲ್ ಮತ್ತು ಕೆಎಲ್-೦1-ಸಿ.ಟಿ-4426 ನಂಬ್ರದ ಕಾರನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿತರು ಕೇರಳ ರಾಜ್ಯದವರಾಗಿದ್ದು, ಪ್ರಸ್ತುತ ಮಂಗಳೂರು ನಗರದ ಹೊರವಲಯದ ಕಾಲೇಜ್ ಒಂದರಲ್ಲಿ ವಿದ್ಯಾಭ್ಯಾಸ
ಮಾಡುತ್ತಿದ್ದವರಾಗಿರುತ್ತಾರೆ. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾನ್ಯ ನ್ಯಾಯಾಲಯವು ಅರೋಪಿತರಿಗೆ
ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರz À ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್, ಐ.ಪಿ.ಎಸ್
ರವರ ಮಾರ್ಗದರ್ಶನಂದAತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ &
ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀ ಶ್ರೀಕಾಂತ್ ಕೆ ರವರ
ಮಾರ್ಗದರ್ಶನದಲ್ಲಿ ಮುಲ್ಕಿ ಠಾಣಾ ಉಪ ನಿರೀಕ್ಷಕರಾದ ಶ್ರೀಮತಿ ಅನಿತಾ ಹೆಚ್.ಬಿ ರವರ ನೇತೃತ್ವದಲ್ಲಿ ಈ ಪತ್ತೆ ಕಾರ್ಯದಲ್ಲಿ ಮುಲ್ಕಿ
ಪೊಲೀಸ್ ಠಾಣೆಯ ಎ.ಎಸ್.ಐ ಉಮೇಶ್, ಹೆಚ್.ಸಿ ಚಂದ್ರಶೇಖರ್, ಯೋಗೀಶ್, ಪಿಸಿಗಳಾದ ವಿನಾಯಕ, ಸುನಿಲ್ ಟಿ ಪಡನಡ, ಶಂಕರ
ಜಡೇದರ್, ಬಸವರಾಜ್, ಸಂದೀಪ್ ಮತ್ತು ಮೊಹಮ್ಮದ್ ಶಾದಾಬ್ ರವರು ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ANTI
DRUG SQUADನ ಅದಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

Ad
Ad
Nk Channel Final 21 09 2023