ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ ಬಂಟ್ಸ್ ಹಾಸ್ಟೆಲ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಮಂಗಳೂರು ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು ಜಾಥಾ 14 ರಂದು ಗುರುವಾರ ಸಂಜೆ 3 ಗಂಟೆಗೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಮೇಯರ್ ಮನೋe, ಜಿಲ್ಲಾಧಿಕಾರಿ ಮುಲೈನ್ ಮುಹಿಲನ್ ಎಂ.ಪಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ: ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಮಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ,
ಡಿ. ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ನಗರ ದಕ್ಷಿಣ ಕ್ಷೇತ್ರ, ಪ್ರವೀಣ್ ಚಂದ್ರ ಆಳ್ವ ಪ್ರತಿಪಕ್ಷ ನಾಯಕರು ಮಂಗಳೂರು ಮಹಾನಗರ ಪಾಲಿಕೆ, ಸುಧೀರ್ ಶೆಟ್ಟಿ ಕಣ್ಣೂರ್ ಮಾಜಿ ಮಹಾಪೌರರು, ನಜ್ಮಾ ಫಾರೂಕಿ, ಕೆ. ಎಸ್.ಪಿ. ಎಸ್ ಎಸಿಪಿ-ಟ್ರಾಫಿಕ್, ಮಂಗಳೂರು ಭಾಗವಹಿಸಲಿದ್ದಾರೆ. ಡಾ. ತಾರಾನಾಥ ಪ್ರಾಂಶುಪಾಲರು, ಎಸ್.ಡಿ.ಎಂ ಕಾನೂನು ಕಾಲೇಜು, ಮಂಗಳೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.