Bengaluru 31°C

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ಮೂರ್ತಿಗೆ ಡ್ರೋನ್ ಡಿಕ್ಕಿ

ವಿಟ್ಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ಡ್ರೋಣ್ ನಿಯಂತ್ರಣ ತಪ್ಪಿ ದೇವರ ಪ್ರಭಾವಳಿಗೆ ಡಿಕ್ಕಿ ಹೊಡೆದಿದೆ.

ಮಂಗಳೂರು: ವಿಟ್ಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ಡ್ರೋಣ್ ನಿಯಂತ್ರಣ ತಪ್ಪಿ ದೇವರ ಪ್ರಭಾವಳಿಗೆ ಡಿಕ್ಕಿ ಹೊಡೆದಿದೆ.


ರಥದಲ್ಲಿ ಏರುವ ಹೊತ್ತಿಗೆ ದೇವರ ಉತ್ಸವ ಮೂರ್ತಿಗೆ ಡ್ರೋಣ್ ಬಡಿದಿದೆ.‌ ಬಳಿಕ ರಥದ ಮೇಲಿದ್ದ ಸಹಾಯಕ ಅರ್ಚಕರ ತಲೆಗೆ ಬಡಿದು ಬಿದ್ದಿದೆ. ಒಮ್ಮೆಗೆ ಈ ಘಟನೆಯಿಂದ ದೇವರ ಮೂರ್ತಿ ಹೊತ್ತ ಅರ್ಚಕರು ತಬ್ಬಿಬ್ಬಾಗಿದ್ದಾರೆ.


ಅವರು ಕೊಂಚ ನಿಯಂತ್ರಣ ತಪ್ಪಿದ್ದರೂ ದೇವರ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ತಕ್ಷಣ ಸಹ ಅರ್ಚಕರು ಡ್ರೋಣ್‌ನ್ನು ಒದ್ದು ಎಸೆದಿದ್ದಾರೆ. ಡ್ರೋಣ್ ಅಪರೇಟರ್ ಹುಚ್ಚಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Nk Channel Final 21 09 2023