Bengaluru 31°C

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಅಮೇರಿಕಾದ ಉದ್ಯಮಿಯಿಂದ 1.25 ಕೋಟಿ ದೇಣಿಗೆ

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮಭಕ್ತರೂ, ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶ್ರೀ ಶಾರದಾ ಪ್ರಸಾದ್

ಸುರತ್ಕಲ್ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮಭಕ್ತರೂ, ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶ್ರೀ ಶಾರದಾ ಪ್ರಸಾದ್ ರವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಪ್ರಸಾದ್ ರವರು ಪಟ್ಲ ಸತೀಶ್ ಶೆಟ್ಟಿಯವರ ಗೃಹಪ್ರವೇಶಕ್ಕೆ ಆಗಮಿಸಿ ಪಟ್ಲರು ಮಾಡುವ ಸತ್ಕಾರ್ಯಗಳನ್ನು ಮೆಚ್ಚಿ ಗೃಹಪ್ರವೇಶದ ದಿನದಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಒಂದು ಕೋಟಿ ಇಪ್ಪತ್ತೈದು ಲಕ್ಷ ಮೊತ್ತದ ದೇಣಿಗೆಯನ್ನು ನೀಡಿ ಆಶೀರ್ವದಿಸಿದರು.


ಸಂಜೆ ನಡೆದ ಪಾವಂಜೆ ಮೇಳದ ಶ್ರೀ ದೇವಿಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ಶ್ರೀ ಶಾರದಾಪ್ರಸಾದ್ ಹಾಗೂ ಶ್ರೀಮತಿ ನಳಿನಿ ಶಾರದಾ ಪ್ರಸಾದ್ ದಂಪತಿಗಳನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಆಡಳಿತ ಮೊಕ್ತೇಸರರು ಶಶೀಂದ್ರ ಕುಮಾರ್ , ಪಟ್ಲ ಫೌಂಡೇಶನ್ ಟ್ರಸ್ಟ್ ನ ಪದಾಧಿಕಾರಿಗಳಾದ ಪಟ್ಲಗುತ್ತು ಮಹಾಬಲ ಶೆಟ್ಟಿ,ಸಿಎ ಸುದೇಶ್ ಕುಮಾರ್ ರೈ, ಸಿಎ ದಿವಾಕರ್ ರಾವ್, ಡಾ. ಸತೀಶ್ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ಭಂಡಾರಿ ಬಿಲ್ಡಸ್೯ನ ಮಾಲಕ ಲಕ್ಷ್ಮೀಶ್ ಭಂಡಾರಿ ಉಪಸ್ಥಿತರಿದ್ದರು.


Nk Channel Final 21 09 2023