Bengaluru 20°C
Ad

ಮಂಗಳೂರಿನಲ್ಲಿ ದೀಪಾವಳಿಗೆ ವಿಶೇಷ ಚೇತನ ಮಕ್ಕಳಿಂದ ಹಣತೆ ತಯಾರಿ

ಮಂಗಳೂರಿನಲ್ಲಿ ದೀಪಾವಳಿಗೆ ವಿಶೇಷ ಚೇತನ ಮಕ್ಕಳಿಂದ ಹಣತೆ ತಯಾರಿ

ಮಂಗಳೂರು: ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳಿಂದ ದೀಪಾವಳಿಗೆ ಹಣತೆ ತಯಾರಿಸಿದ್ದಾರೆ. ವಿಶೇಷ ಚೇತನರು ತಯಾರಿಸಿದ ಹಣತೆಗೆ ದೇಶ ವಿದೇಶಗಳಿಂದಲೂ ಬೇಡಿಕೆ ಇದೆ. ಕುಂಬಾರರಿಂದ ಖರೀದಿಸಿರುವ ಮಣ್ಣಿನ ಹಣತೆಗಳಿಗೆ ವಿಶೇಷ ಚೇತನರು ರಂಗು ನೀಡಿದ್ದಾರೆ. ಶಿಕ್ಷಕಿಯರ ಮಾರ್ಗದರ್ಶನದಂತೆ ಬಣ್ಣಬಣ್ಣದ ರಂಗು ತುಂಬಿ ಚಂದಗಾಣಿಸುವ ವಿಶೇಷ ವಿದ್ಯಾರ್ಥಿಗಳು.

Ad

ಹಣತೆ ತಯಾರಿಯಲ್ಲಿ 30 ಮಕ್ಕಳು ತೊಡಗಿಸಿಕೊಂಡಿದ್ದಾರೆ. ದೀಪಾವಳಿಗಿಂತ 2 ತಿಂಗಳ ಮೊದಲೇ ಹಣತೆ ತಯಾರಿ ಕಾರ್ಯ ಆರಂಭವಾಗುತ್ತದೆ. ಲೆಕ್ಕಾಚಾರದ ಪ್ರಕಾರ 15 ರಿಂದ 18 ಸಾವಿರ ಹಣತೆಗಳನ್ನು ತಯಾರಿ ಮಾಡಿದ್ದಾರೆ. ಇಲ್ಲಿ 21ವಿವಿಧ ಗಾತ್ರ, ಶೈಲಿಯನ್ನು ಹೊಂದಿರುವ ಹಣತೆಗಳನ್ನು ತಯಾರಿಸಲಾಗುತ್ತಿದ್ದು, 10 ರೂಪಾಯಿಯಿಂದ 60ರೂಪಾಯಿವರೆಗೆ ಹಣತೆಗಳು ಇಲ್ಲಿ ಲಭ್ಯವಿದೆ.

Ad

ನವೆಂಬರ್ 1ರವರೆಗೆ ಇದೆ ಶಾಲೆಯಲ್ಲಿ ಹಣತೆಗಳ ಮಾರಾಟ ನಡೆಯಲಿದೆ. ಕಳೆದ ಬಾರಿ ಹಣತೆಯಿಂದ ವಿಶೇಷ ಚೇತನರ ಶಾಲೆಗೆ 4ಲಕ್ಷ ರೂ. ಆದಾಯವಾಗಿದೆ. ವಿಶೇಷ ಚೇತನರನ್ನ ಪ್ರೋತ್ಸಾಹಿಸಲು ಜನರು ಹಣತೆ ಖರೀದಿಸುತ್ತಾರೆ.

Ad

 

Ad
Ad
Nk Channel Final 21 09 2023