Bengaluru 26°C
Ad

ಮಂಗಳೂರು: ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ

ಮಂಗಳೂರು: ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ

ಮಂಗಳೂರು : ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಈ ಸಂಭ್ರಮದ ಪ್ರಯುಕ್ತ ಮಂಗಳೂರು ಶಕ್ತಿ ನಗರದಲ್ಲಿ ಇರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನ ಆಚರಣೆ ಮಾಡಲಾಯಿತ್ತು.

ಸಣ್ಣ ಸಭಾಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು ಶ್ರೀಮತಿ ಶಿವಾನಿ ಬಾಳಿಗಾ ಕಾರ್ಯದರ್ಶಿ ಇನ್ನರ್ ವೀಲ್ ಕ್ಲಬ್ ಆಫ್ ಮಂಗಳೂರು ಉತ್ತರ , ಶ್ರೀಮತಿ ಜ್ಯೋತಿಕಾ ಆಳ್ವ – ನಿರ್ದೇಶಕರು ಟೆಥರ್ಫಿ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ , ಡಾ. ಎಸ್.ಎಂ.ರಶೀದ್ – ಅಧ್ಯಕ್ಷರು ಬ್ಯಾರಿಸ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ , ಶ್ರೀ. ಸಂತೋಷ್ ಸಿಕ್ವೇರಾ – ಪ್ರೊಪ್ರೈಟರ್ ಸಂತೋಷ್ ಅರೇಂಜರ್ಸ್, ಮಂಗಳೂರು ಶ್ರೀ ದಾಮೋಧರ್ ದಂಡೆಕೇರಿ – ಎಂಡಿ ಯಾಮಿನಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ , ಸಂಸ್ಥೆಯ ವಸಂತ್ ಕುಮಾರ್ ಶೆಟ್ಟಿ ಸಹಿತ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದೀಪ ಬೆಳಗಿಸಿ ಉದಾಘಾಟಿಸಲಾಯಿತ್ತು , ಬಳಿಕ ನೆರೆದ ಅತಿಥಿಗಳು ಶುಭಕೋರಿದರು , ಬಳಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ ಸಂಸ್ಕೃತಕ ಕಾರ್ಯಕ್ರಮ ನಡೆಯಿತ್ತು . ಭಿನ್ನ ಸಾಮರ್ತ್ಯದ ಮಕ್ಕಳು ಪಟಾಕಿ ಸಿಡಿಸಿ , ಸುರ್ಸುರು ಕಡ್ಡಿ ಹೊತ್ತಿಸಿ ದೀಪಾವಳಿ ಹಬ್ಬವನ್ನ ಸಂಭ್ರಮಿಸಿದರು.

Ad
Ad
Nk Channel Final 21 09 2023