ಮಂಗಳೂರು: ದಕ್ಷಿಣ ಕನ್ನಡಜಿಲ್ಲಾ ಮಟ್ಟದ ಈಜು ಸ್ಪರ್ಧೆ ಸೆ. ರಂದು 2024-25 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಉತ್ತರ ವಲಯ ಹಾಗೂ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಫ್ರೌಡಶಾಲಾ ವಿಭಾಗದ ಬಾಲಕ ಬಾಲಕಿಯರ ಈಜು ಸ್ಪರ್ಧೆಯು ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ನಡೆಯಿತು.
ಜಿಲ್ಲೆಯಾದ್ಯಂತ ಅನೇಕ ಶಾಲೆಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈಜು ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ಹಿರಿಯ
ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೆರವೇರಿತು. ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವು ಆರಂಭವಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಂದನೀಯ ಗುರುಗಳಾದ ಜೋನ್ಸನ್ ಪಿಂಟೊ ಎಸ್.ಜೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯದ ಶಿಕ್ಷಣಾಧಿಕಾರಿ ಜೇಮ್ಸ್‍ಕುಟಿನ್ನೊ , ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀಯುತ ಭರತ್ ,ಮತ್ತು ಶ್ರೀಮತಿ ಚೆಲುವಮ್ಮ ,ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಿಕ್ಟರ್ ಸೆರಾವೋ , ಹಳೆವಿಧ್ಯಾರ್ಥಿ ಸಂಘದ ಅಧ್ಯಕ್ಷ ಕ್ರಿಸ್ಟೋಫರ್ ಡಿಸೋಜ , ಈಜುಕೊಳದ ನಿರ್ದೇಶಕರಾದ ಶ್ರೀಯತ ನವೀನ್ ಮತ್ತು ಶ್ರೀಮತಿ ರೂಪ ಪ್ರಭು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ ಸ್ಥಾನದಿಂದ ಮಾತಾನಾಡಿದ ಶ್ರೀ ಜೇಮ್ಸ್ ಕುಟಿನ್ನೊ ರವರು ಈಜು ಸ್ಪರ್ಧೆಯನ್ನು ಆಯೋಜಿಸುವಲ್ಲಿ ಜವಾಬ್ದಾರಿಯನ್ನು ವಹಿಸಿದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯನ್ನು ಅಭಿನಂಧಿಸಿದರು.
“ಈಜಿನಲ್ಲಿ ಈಸಬೇಕು ಬದುಕಿನಲ್ಲಿಜಯಿಸಬೇಕು”ಎಂದು ಕಿವಿಮಾತು ಹೇಳಿದರು. ತಾಲೂಕು ಮಟ್ಟದ ದೈಹಿಕ ಶಿಕ್ಷಣಾಧಿಕಾರಿ ಭರತ್‍ರವರು ವಿದ್ಯಾರ್ಥಿಜೀವನದಲ್ಲಿ ಶಿಕ್ಷಣ ಮತ್ತು ಕ್ರೀಡೆಗಳೆರಡು ಬಹು ಮುಖ್ಯವಾದುವು ಎಂದು ಅದರ ಮಹತ್ವವನ್ನು ತಿಳಿಸಿದರು.
ಈಜು ಸ್ಪರ್ಧೆಯನ್ನು ಶಾಲೆಯಲ್ಲಿ ಏರ್ಪಡಿಸಿದಕ್ಕಾಗಿ ಸಂಚಾಲಕರಿಗೆ ಮತ್ತು ಮುಖ್ಯೋಪಾಧ್ಯಾಯಿನಿಯವರಿಗೆ ಪ್ರಮಾಣ ಪತ್ರಕೊಟ್ಟು ಗೌರವಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತಾನಾಡಿದ ಫಾ ಜೋನ್ಸನ್ ಪಿಂಟೊ ಎಸ್.ಜೆ ಮಕ್ಕಳು ತಮ್ಮ ಭಯವನ್ನು ಹೋಗಲಾಡಿಸಲು ಈಜು ಕಲಿಯಬೇಕು. ಈಜು ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮವನು ಒದಗಿಸುತ್ತದೆ ಎಂದು ಹೇಳಿದರು. ಈ ಸುಂದರ ಕಾರ್ಯಕ್ರಮವನ್ನು ಶ್ರೀಯುತ ಲೀಯಾ ಡಿಸೋಜರವರು ನಿರ್ವಹಿಸಿದರು. ಶಿಕ್ಷಕಿ ಪೂರ್ಣಿಮಾರವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು.
ವೈಯುಕ್ತಿಕ ಚಾಂಪಿಯನ್ ಶಿಪ್ 17
ವರ್ಷದೊಳಗಿನ ಬಾಲಕರು
1 ಗೃತಿಕ್ ಜಿ. ಪ್ರಭು ಮತ್ತು ಯಶಸ್ ಸಂತ
ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲ್ ಬೈಲ್
ಮಂಗಳೂರು
2 ಪ್ರತೀಕ್ ಜಯ ಪ್ರಶಾಂತ್ ಸಂತ
ಅಲೋಶಿಯಸ್ ಇಂಗ್ಲಿಷ್ ಮಾದ್ಯಮ ಶಾಲೆ ಉರ್ವ
ವೈಯುಕ್ತಿಕ ಚಾಂಪಿಯನ್ ಶಿಪ್ 17
ವರ್ಷದೊಳಗಿನ ಬಾಲಕಿಯರು
1 ಮಿಥಾಲಿ ಭಟ್ ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್
2 ರಿಯಾನ್ನಾದೃತಿ ¥sóÉರ್ನಾಂಡಿಸ್ ಲೇಡಿಹಿಲ್
ವಿಕ್ಟೋರಿಯಾ ಹೈಸ್ಕೂಲ್
ಸಮಗ್ರ ಚಾಂಪಿಯನ್ ಶಿಪ್ ವಿಕ್ಟೋರಿಯಾ
ಹೈಸ್ಕೂಲ್ ಲೇಡಿಹಿಲ್
ವೈಯುಕ್ತಿಕ ಚಾಂಪಿಯನ್‍ಶಿಪ್ (14
ವರ್ಷದೊಳಗಿನ ಬಾಲಕರು)
1 ಲಿಕಿತ್‍ರಾಮಚಂದ್ರ ವಿವೇಕಾನಂದ ಇಂಗ್ಲಿಷ್
ಮಾಧ್ಯಮ ಶಾಲೆ
2 ಅಬಿಷೇಕ್ ಆಳ್ವಸ್ ಕನ್ನಡ ಮಾಧ್ಯಮ ಶಾಲೆ
ಸಮಗ್ರ ಚಾಂಪಿಯನ್ ಶಿಪ್ 14 ವರ್ಷದೊಳಗಿನ
ಬಾಲಕರ ವಿಭಾಗದಲ್ಲಿ ಸಂತ ಅಲೋಶಿಯಸ್
ಕಾಲೇಜು ಹಿರಿಯ ಪ್ರಾಥಮಿಕ ಶಾಲೆ
ಪಡೆದುಕೊಂಡಿದೆ.
14 ವರ್ಷದ ಬಾಲಕಿಯರ ವಿಭಾಗದಲ್ಲಿ
1 ಪ್ರಾಪ್ತಿಜಯಪ್ರಶಾಂತ್ ಲೇಡಿಹಿಲ್ ಇಂಗ್ಲಿಷ್
ಮಾಧ್ಯಮ ಶಾಲೆ
2 ಶ್ರಾವ್ಯ ಸಂತ ಜೋಸೆಪ್ ಆಂಗ್ಲ ಮಾಧ್ಯಮ
ಶಾಲೆ ಕುಲಶೇಕರ
ಸಮಗ್ರ ಚಾಂಪಿಯನ್‍ಶಿಪ್ ಲೇಡಿಹಿಲ್
ವಿಕ್ಟೋರಿಯಇಂಗ್ಲಿಷ್ ಮಾಧ್ಯಮ ಶಾಲೆ ಲೇಡಿಹಿಲ್.