Bengaluru 25°C
Ad

ವನಮಹೋತ್ಸವದ ಪ್ರಯುಕ್ತ ಸ್ವಸ್ತಿಕ್ ಕಲಾ ಕೇಂದ್ರ ಜಲ್ಲಿಗುಡ್ಡೆ ವತಿಯಿಂದ ಸಾರ್ವಜನಿಕರಿಗೆ ಸಸಿ ವಿತರಣೆ

Swasthik

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ, ಜಲ್ಲಿಗುಡ್ಡೆ ಇದರ ವತಿಯಿಂದ ವನಮಹೋತ್ಸವದ ಅಂಗವಾಗಿ ಪಡೀಲ್ ದ್ವಾರದ ಬಳಿ ಸಾರ್ವಜನಿಕರಿಗಾಗಿ ಸಸಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
Swahik

ಹೊನ್ನೆ,ಬಾದಾಮಿ,ನೆಲ್ಲಿ,ಸಾಗುವಾನಿ,ಪೇರಳೆ,ಮಹಾಗನಿ,ಶ್ರೀಗಂಧ, ನೇರಳೆ,ಹೊಳೆ ದಾಸವಾಳ,ಸಫೋಟ ಮುಂತಾದ ನೂರೈವತ್ತಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು. ಮನೆಗೊಂದು ಮರವಿರಲಿ- ತಂಪಾದ ನೆರಳಿರಲಿ ಎಂಬ ಶೀರ್ಷಿಕೆಯಡಿ ಪರಿಸರ ಸಂರಕ್ಷಣೆಯ ಚಿಂತನೆಯೊಂದಿಗೆ ಕಾರ್ಯಕ್ರಮ ನಡೆಸಲಾಗಿತ್ತು.

Swasthik (1)
ಈ ಸಂದರ್ಭದಲ್ಲಿ ಮಾತನಾಡಿದ ಗೌರವಾಧ್ಯಕ್ಷ ಬಿ ಪ್ರಕಾಶ್ ಪೈ. ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಪಡಿಸಿದ್ದೇವೆ. ಇಂದು ಶುದ್ದ ಗಾಳಿ, ನೀರು,ಆಹಾರ ಎಲ್ಲವೂ ಕಲುಷಿತವಾಗಿದೆ.

ಶುಧ್ದ ಆಮ್ಲಜನಕ ಕ್ಕಾಗಿ ಪ್ರತಿಯೊಬ್ಬರೂ ಗಿಡ ನೆಡುವ ಕಾಯಕ ಮುಂದುವರಿಸುವುದರೊಂದಿಗೆ ಭವಿಷ್ಯದ ಪೀಳಿಗೆಯನ್ನು ರಕ್ಷಿಸುವ ಹೊಣೆ ನಮ್ಮ ಕೈಯಲ್ಲಿದೆ ಎಂದರು. ಈ ಸಂಧರ್ಭ ಸ್ಥಳೀಯ ಅನೇಕ ಗಣ್ಯರಿಗೆ ವಿವಿಧ ಸಸಿ ಹಸ್ತಾಂತರಿಸಲಾಯಿತು.

Mng

ಸಂಸ್ಥೆಯ ಅಧ್ಯಕ್ಷ ಅಶೋಕ್ ಜಾದವ್,ಉಪಾಧ್ಯಕ್ಷೆ ಉಷಾ, ಕೋಶಾಧಿಕಾರಿ ಲಲಿತಾ, ಲೆಕ್ಕ ಪರಿಶೋಧಕಿ ಸುಮಲತಾ, ಸಮಾಜ ಸೇವಾ ಕಾರ್ಯದರ್ಶಿ ಶೋಭಾ, ಶೈಕ್ಷಣಿಕ ಕಾರ್ಯದರ್ಶಿ ಆನಂದ ರಾವ್, ಸಮಿತಿ ನಾಯಕ ನಾಗೇಶ್ ಎಂ., ಗಂಗಾಧರ್, ವಿಜಯ್ ಕುಮಾರ್ , ಶಶಿಕಲಾ ಸುವರ್ಣ, ಪ್ರೇಮ, ವಿದ್ಯಾ, ಮಲ್ಲಿಕಾ, ದಾಕ್ಷಾಯಿಣಿ , ಶ್ರೇಯಸ್ ಹಾಗೂ ಗಾಯತ್ರಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ನಿರೂಪಿಸಿದರು.
New Project

Ad
Ad
Nk Channel Final 21 09 2023
Ad