Bengaluru 23°C
Ad

ಮಾತಾ ವೈಷ್ಣೋದೇವಿ ದರ್ಶನಕ್ಕೆ ಜಮ್ಮುವಿನಿಂದ ನೇರ ಹೆಲಿಕಾಪ್ಟರ್ ಸೇವೆ ಆರಂಭ

Vaishno Devi

ಮ್ಮು: ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದಾದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ನೇರ ಹೆಲಿಕಾಪ್ಟರ್ ಸೇವೆ ಮಂಗಳವಾರದಿಂದ ಆರಂಭಗೊಂಡಿದ್ದು, ಒಂದೇ ದಿನದಲ್ಲಿ ದರ್ಶನ ಕೈಗೊಳ್ಳುವವರಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad
300x250 2

ಪರ್ವತ ಮೇಲಿರುವ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಕ್ಕೆ ಕತ್ರಾ ಬೇಸ್​ ಕ್ಯಾಂಪ್​ನಿಂದ ಹೆಲಿಕಾಪ್ಟರ್​​ ಸೇವೆ ನಡೆಸುತ್ತಿತ್ತು. ಇದಕ್ಕೆ 2,100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇದೀಗ ಜಮ್ಮುನಿಂದ ಹೆಲಿಕಾಪ್ಟರ್ ಪ್ಯಾಕೇಜ್ ಆರಂಭಿಸಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 35000 ಸಾವಿರ ಹಾಗೂ ಎರಡು ದಿನಕ್ಕೆ 60 ಸಾವಿರದಂತೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಚರಣೆಯು ಜಮ್ಮು ವಿಮಾನ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಹೊರೆಟು ಹತ್ತು ನಿಮಿಷದಲ್ಲಿ ಕಾತ್ರ ತಲುಪಲಿದೆ. ಇದರ ಮೂಲಕ ‘ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಹೊಣೆಗಾರಿಕೆ ಇದಾಗಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ (SMVDSB) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಶುಲ್ ಗಾರ್ಗ್ ಉದ್ಘಾಟನೆಯ ನಂತರ ಕತ್ರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Ad
Ad
Nk Channel Final 21 09 2023
Ad