Bengaluru 22°C
Ad

40 ವರ್ಷಗಳಿಂದ ಅರ್ಜಿ ಹಾಕಿದ್ರೂ ಇನ್ನೂ ಕುಡಿಯುವ ನೀರಿನ ಸಂಪರ್ಕವಾಗಿಲ್ಲ: ಶಾಸಕ ಅಶೋಕ್ ರೈ ಗೆ ದೂರು

ನಾನು ಕಳೆದ 40 ವರ್ಷಗಳಿಂದ ಕುಡಿಯುವ ನೀರಿನ‌ ಸಂಪರ್ಕಕ್ಕೆ ಆರ್ಯಾಪು ಗ್ರಾಪಂಗೆ ಮನವಿ‌ ಮಾಡುತ್ತಿದ್ದರೂ ಕುಡಿಯುವ ನೀರಿನ‌ ಸಂಪರ್ಕ ಕೊಟ್ಟಿಲ್ಲ ಎಂದು ಗ್ರಾಮದ ಪುಂಡಿಕಾಯಿ ನಿವಾಸಿ ಅಪ್ಪಿ ಎಂಬವರು ಶಾಸಕರಿಗೆ ದೂರು ನೀಡಿದ್ದಾರೆ.

ಪುತ್ತೂರು: ನಾನು ಕಳೆದ 40 ವರ್ಷಗಳಿಂದ ಕುಡಿಯುವ ನೀರಿನ‌ ಸಂಪರ್ಕಕ್ಕೆ ಆರ್ಯಾಪು ಗ್ರಾಪಂಗೆ ಮನವಿ‌ ಮಾಡುತ್ತಿದ್ದರೂ ಕುಡಿಯುವ ನೀರಿನ‌ ಸಂಪರ್ಕ ಕೊಟ್ಟಿಲ್ಲ ಎಂದು ಗ್ರಾಮದ ಪುಂಡಿಕಾಯಿ ನಿವಾಸಿ ಅಪ್ಪಿ ಎಂಬವರು ಶಾಸಕರಿಗೆ ದೂರು ನೀಡಿದ್ದಾರೆ.

Ad

ನಾವು ಪುಂಡಿಕಾಯಿಯಲ್ಲಿ‌ಮನೆ ಯಲ್ಲಿ‌ಕಳೆದ‌ 40 ,ವರ್ಷಗಳಿಂದ ವಾಸ ಮಾಡುತ್ತಿದ್ದೇವೆ, ನಮಗೆ ಕುಡಿಯುವ ನೀರಿಗೆ ಯಾವುದೇ ಆಧಾರವಿಲ್ಲ. ಬಾವಿಯೂ ಇಲ್ಲ. ಪಕ್ಕದ‌ಮನೆಯಿಂದ ಕುಡಿಯಲು‌ನೀರು ತರುತ್ತಿದ್ದೇನೆ,‌ಮಳೆಗಾಲದಲ್ಲಿ‌ಮಳೆಯ‌ನೀರನ್ನೇ ಕುಡಿಯುತ್ತಿದ್ದೇನೆ. ನಾನು ಮನೆಯಲ್ಲಿ ಏಕಾಂಗಿಯಾಗಿದ್ದು‌ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ‌ಎಂದು ಶಾಸಕರಲ್ಲಿ‌ದೂರು‌ ನೀಡಿದ್ದಾರೆ.

Ad

ನೀರಿನ‌ ವ್ಯವಸ್ಥೆಗೆ ಶಾಸಕರ ಸೂಚನೆ:  ಅಪ್ಪಿ ಅವರ‌ಮನೆಗೆ‌ ನೀರು‌ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಗ್ರಾಪಂ ಗೆ ಸೂಚನೆ‌ ನೀಡಿದ್ದಾರೆ.‌ ಪುಂಡಿಕಾಯಿ ಆರ್ಯಾಪು ಮತ್ತು ಒಳಮೊಗ್ರು ಗ್ರಾಮದ ಗಡಿಯಲ್ಲಿದ್ದು ಎರಡೂ ಗ್ರಾಪಂ ಪಿಡಿಒಗಳು ಈ ವಿಚಾರದಲ್ಲಿ‌ಮುತುವರ್ಜಿ‌ವಹಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದು,‌ ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂಗೂ ಶಾಸಕರು‌ ಸೂಚನೆ ನೀಡಿದ್ದಾರೆ.

Ad
Ad
Ad
Nk Channel Final 21 09 2023