ಪುತ್ತೂರು: ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರಿಂದ ಬಿಲ್ಲವ ಯುವತಿ ಮತ್ತು ಭಜನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಹಿಂದೂಪರ ಸಂಘಟನೆಗಳಿಂದ ಪುತ್ತೂರು ಡಿವೈಎಸ್ಪಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಜೀವ ಪೂಜಾರಿ ಹಿಂದೂ ಕಾರ್ಯಕರ್ತನೋರ್ವನೊಂದಿಗೆ ಮಾತನಾಡಿದ ಆಡಿಯೋದಲ್ಲಿ ಬಿಲ್ಲವ ಯುವತಿಯರಿಗೆ ಅವಹೇಳನ ಮಾಡಿದ್ದಾರೆ. ಭಜನೆಯಲ್ಲಿ ಪಾಲ್ಗೊಂಡ 1 ಲಕ್ಷ ಬಿಲ್ಲವ ಯುವತಿಯರು ವ್ಯಭಿಚಾರಿಗಳಾಗಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ.
ಸಂಜೀವ ಪೂಜಾರಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಲಾಗಿದೆ. ಡಿವೈಎಸ್ಪಿ ಕಛೇರಿ ಮುಂಧೆ ಭಜನೆ ಮಾಡಿ ಧರಣಿ ಮಾಡಲಾಯಿತು. ಬಂಧಿಸುವವರೆಗೂ ಡಿವೈಎಸ್ಪಿ ಕಛೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದು,
ಪೊಲೀಸ್ ಇಲಾಖೆಗೆ ಹೆಚ್ವಿದ ಒತ್ತಡ ಹೇರಲಾಗಿದೆ. ಸಂಜೀವ ಪೂಜಾರಿ ವಿರುದ್ಧ ಈಗಾಗಲೇ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಎಫ್ಐಆರ್ ನಲ್ಲಿ ಕ್ಷುಲ್ಲಕ ಸೆಕ್ಷನ್ ಹಾಕಿದ್ದಾರೆಂದು ಹಿಂದೂ ಸಂಘಟನೆಗಳ ಆರೋಪ ಮಾಡಿದೆ.