ಮಂಗಳೂರು: ನಾವು ಕಳೆದ 26-07-2024 ರಿಂದೀಚೆಗೆ ಬ್ಯಾಟರಿ ರಿಕ್ಷಾ ಚಾಲಕರಿಗೆ ಪರವಾನಗಿಯೇ ಬೇಡ. ಎಲ್ಲಿ ಬೇಕಾದರೂ (ದೇಶಾದ್ಯಂತ) ಹೋಗಬಹುದು ಇತರ ರಿಕ್ಷಾಗಳಿಗೆ ಪರವಾನಿಗೆಯಲ್ಲಿ ಸೂಚಿಸಿದಲ್ಲಿ ಮಾತ್ರವೆಂಬ ಬೇಧ ನೀತಿಯನ್ನು ವಿರೋಧಿಸಿ, ಎಲ್ಲರೂ ಮೋಟಾರು ವಾಹನ ಕಾಯಿದೆಯ ನಿಯಮದಂತೆ ಒಂದೇ ರೀತಿಯ ನಿಯಮಗಳಿಗೆ ಒತ್ತಾಯಿಸಿ, ಚಳುವಳಿ ನಡೆಯುತ್ತಿದೆ.
09-12-2024ರಿಂದ ಆರಂಭಗೊಳ್ಳುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಸೂಕ್ತ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಿ, ಪ್ರಾಧಿಕಾರದ ಇತಿಮಿತಿಗಳಿಗೆ ಬದ್ಧವಾಗಿ ಪರವಾನಿಗೆಗಳಿರುವಂತೆ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಒತ್ತಾಯಿಸುತ್ತೇವೆ.
ಪ್ರತಿಭಟನೆಯ ನೇತೃತ್ವವನ್ನು ಬಿ ವಿಷ್ಣುಮೂರ್ತಿಯವರು ವಹಿಸಿದ್ದರು. ಮಹಮ್ಮದ್ ಜಿಲಾನಿ ಸ್ವಾಗತಿಸಿದರು. ಚಂದ್ರಹಾಸ ಕುಲಾಲ, ಸತೀಶ್ ಕುಮಾರ್, ಆಲ್ಫೋನ್ಸ್ ಡಿಸೋಜ, ರಜಾಕ್ ವಾಮಂಜೂರು, ಮೋಹನ ಕೆಇ, ವಸಂತ ದೇವಾಡಿಗ, ದಯಾನಂದ ಶೆಟ್ಟಿ, ಪ್ರವೀಣ್ ಡಿಸೋಜ ಭಾಗವಹಿಸಿದ್ದರು.