ಮಂಗಳೂರು: ವಕ್ಫ್ ವಿವಾದದ ವಿರುದ್ಧ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್ ಹಗರಣ ಒಂದು ಲ್ಯಾಂಡ್ ಜಿಹಾದ್. ವಕ್ಫ್ ಹಗರಣ ದೇಶದಲ್ಲೇ ಅತೀ ದೊಡ್ಡ ಹಗರಣವಾಗಿದೆ. ಕಾಂಗ್ರೆಸ್ ನವರು ಬ್ರಿಟಿಷರ ಗುಂಗಿನಲ್ಲೇ ಇದ್ದಾರೆ. ಹೀಗಾಗಿ ವಕ್ಫ್ ಪೆಡಂಭೂತ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದರು.
Ad
ಮಂಗಳೂರು ತಾಲೂಕಿನಲ್ಲೆ 24 ವರ್ಷದಲ್ಲಿ 37 ಪ್ರಾಪರ್ಟಿ ವಖ್ಫ್ ಗೆ ಹೋಗಿದೆ. ಈ ಪೈಕಿ 50.ಶೇಖಡ ಭೂಮಿ ಸರಕಾರಿ ಭೂಮಿಯಾಗಿದೆ. ಸಿದ್ದರಾಮಯ್ಯ ಸೂಚನೆ ಆಧಾರದಲ್ಲಿ ಜಮೀರ್ ಅಹ್ಮದ್ ಈ ರೀತಿ ಮಾಡುತ್ತಿದ್ದಾರೆ. ವಕ್ಫ್ ಅತೀ ದೊಡ್ಡ ಲ್ಯಾಂಡ್ ಬ್ಯಾಂಕ್ ಹೊಂದಿದೆ. ಆದರೆ ಯಾಕೆ ಮುಸಲ್ಮಾನರನ್ನ ಬಡತನ ರೇಖೆಯಿಂದ ಮೇಲೆ ತರಲು ಆಗಲಿಲ್ಲ.
Ad
ವಕ್ಫ್ ಕಾನೂನು ಒಂದು ಮರಣಶಾಸನ. ರೈತರ ಭೂಮಿಯನ್ನ ವಕ್ಫ್ ಅಸ್ತಿ ಎಂದು ಗುರುತಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ವಕ್ಫ್ ಗೋಲ್ ಮಾಲ್ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.
Ad
Ad