Bengaluru 20°C
Ad

ಕರಾವಳಿಯಲ್ಲಿ ಮತ್ತೆ ತಾರಕಕ್ಕೇರುತ್ತಿದೆ ದೈವಾರಾಧಕರು V/S ಸಿನಿಮಾ ಫೈಟ್!

ಕರಾವಳಿಯಲ್ಲಿ ಮತ್ತೆ ದೈವಾರಾಧಕರು ಮತ್ತು ಸಿನಿಮಾ ತಂಡದ ನಡುವೆ ವಾಗ್ವಾದ ನಡೆಯುತ್ತಿದೆ. ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶನವಾದರೆ ನಾವೇ ನುಗ್ಗಿ ತಡೆಯುತ್ತೇವೆ ಎಂದು ದೈವಾರಾಧಕರಿಂದ ನೈತಿಕ ಪೊಲೀಸ್ ಗಿರಿಯ ಎಚ್ಚರಿಕೆ ನೀಡಿದ್ದಾರೆ. 

ಮಂಗಳೂರು : ಕರಾವಳಿಯಲ್ಲಿ ಮತ್ತೆ ದೈವಾರಾಧಕರು ಮತ್ತು ಸಿನಿಮಾ ತಂಡದ ನಡುವೆ ವಾಗ್ವಾದ ನಡೆಯುತ್ತಿದೆ. ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶನವಾದರೆ ನಾವೇ ನುಗ್ಗಿ ತಡೆಯುತ್ತೇವೆ ಎಂದು ದೈವಾರಾಧಕರಿಂದ ನೈತಿಕ ಪೊಲೀಸ್ ಗಿರಿಯ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ. ಮಂಗಳೂರಿನಲ್ಲಿ ಸಿಡಿದೆದ್ದ ದೈವ ನರ್ತಕ ನಲಿಕೆ ಸಮುದಾಯದಿಂದ ಎಚ್ಚರಿಕೆ ನೀಡಲಾಗಿದೆ. ದೈವಾರಾಧನೆ ಅಪಹಾಸ್ಯ ವಿರುದ್ಧ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ, ಅದರೆ ಈವರೆಗೂ  ಎಫ್ ಐ ಆರ್ ದಾಖಲಾಗಿಲ್ಲ. ಇನ್ನು  ಎಫ್ ಐ ಆರ್ ದಾಖಲಿಸುವಂತೆ ಅಗ್ರಹಿಸಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ಮಾಡಲು  ದೈವಾರಾಧಕರು ಬಂದಿದ್ದಾರೆ.

ಈ ವೇಳೆ ದೈವಾರಾಧಕ ಶ್ರೀಧರ ಕಬತ್ತಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ನಾವು ಕಾನೂನನ್ನ ಕಾಯೋದಿಲ್ಲ ನಾವೇ ನೇರವಾಗಿ ನುಗ್ಗುತ್ತೇವೆ ಬೇರೆ ಧರ್ಮದವರೂ ದೈವಗಳಿಗೆ ಅಪಹಾಸ್ಯ ಮಾಡಿದಾಗ ಮಾತ್ರ ಮಾತನಾಡೋದಲ್ಲ, ಈ ವಿಚಾರದಲ್ಲೂ ಹಿಂದೂ ಸಂಘಟನೆಗಳು ಮಾತನಾಡಬೇಕು. ನಮಗೆ ಬೆಂಬಲ ಇಲ್ಲ ಎಂದಾದರೆ ನಾವೇ ನೈತಿಕ ಪೊಲೀಸ್ ಗಿರಿ ಮಾಡುತ್ತೇವೆ. ನಿಷ್ಠಾವಂತ ದೈವಾರಾಧಕರು ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಆದ ಅಪಮಾನಕ್ಕೆ ದೂರು ನೀಡಿದರೂ ಎಫ್ ಐ ಆರ್ ಆಗಿಲ್ಲ, ಇನ್ನು ನಮಗೆ ಕಾಯುವ ತಾಳ್ಮೆ ಇಲ್ಲ ಮುಂದೆ ನೈತಿಕ ಪೊಲೀಸ್ ಗಿರಿ ಮಾಡುತ್ತೇವೆ ಇಲ್ಲವಾದಲ್ಲಿ ಸಿನಿಮಾದಲ್ಲಿ ಅಪಹಾಸ್ಯ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಇಲ್ಲವಾದರೆ ಮೂರು ದಿನಗೊಳಗೆ ಎಫ್ ಐ ಆರ್ ಆಗದೆ ಹೋದರೆ ಅವರ ಮನೆಗೆ ನಾವೇ ಹೋಗುತ್ತೇವೆ

Ad
Ad
Nk Channel Final 21 09 2023