ಮಂಗಳೂರು: ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದ ಅಪರೂಪದ ಪ್ರಕರಣ ಮಂಗಳೂರು ಹೊರಲವಲಯದ ಕಿನ್ನಿಗೋಳಿ ಬಳಿ ನಡೆದಿದೆ.
ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ್ದು ವಿಶೇಷವೆಂದರೆ ಕರುವಿನ ದೇಹ ಒಂದೇ ಆಗಿದ್ದು ತಲೆ ಎರಡು ಇದೆ. ತಲೆ ಒಂದಕ್ಕೊಂದು ಅಂಟಿಕೊಂಡಿದ್ದು,ನಾಲ್ಕು ಕಣ್ಣುಗಳಿದೆ,ಮದ್ಯ ಭಾಗದ ಎರಡು ಕಣ್ಣುಗಳು ಚಲನೆಯಲ್ಲಿಲ್ಲ ಮತ್ತೆರಡು ಕಣ್ಣುಗಳು ಸರಿಯಾಗಿ ಇದೆ.ಎದ್ದು ನಿಲ್ಲಲು ಸಾದ್ಯವಾಗದ ಈ ಕರುವಿಗೆ ಮಕ್ಕಳಿಗೆ ನೀಡುವ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.
Ad