Bengaluru 22°C
Ad

ʼಹಿಂದೂಗಳ ಧಾರ್ಮಿಕ ಮೆರವಣಿಗೆ ರಕ್ಷಣೆಗೆ 50 ಮಂದಿ ಶ್ರೀರಾಮ‌ಸೇನೆ ಕಾರ್ಯಕರ್ತರು ತಲವಾರು ಸಮೇತ ಸಜ್ಜುʼ

Controvercial

ಮಂಗಳೂರು: ಹಿಂದೂಗಳ ಧಾರ್ಮಿಕ ಮೆರವಣಿಗೆ ವೇಳೆ ಮುಸ್ಲಿಂ ಗೂಂಡಾಗಳಿಂದ ರಕ್ಷಣೆ ಮಾಡಲು 50 ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರು ತಲವಾರು ಹಿಡಿದು ತಯಾರಾಗಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವುದು ನಮ್ಮ ಸರ್ಕಾರ ಅಂತ ಮುಸ್ಮಿಂ ಗುಂಡಾಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಇಲ್ವೋ ಗೊತ್ತಿಲ್ಲ. ನಾಗಮಂಗಲ ಕೋಮುಗಲಭೆ ಘಟನೆ ಆಕಸ್ಮಿಕ ಅಂತಾರೆ. ಗೃಹ ಮಂತ್ರಿಗಳು ಅಯೋಗ್ಯರು. ವ್ಯವಸ್ಥಿತಿವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ? ಇದೇ ಮುಸ್ಲಿಂ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಕೋಮುಗಲಭೆ ಘಟನೆ ಹಿಂದೆ ಪಿಎಫ್​ಐನವರಿದ್ದಾರೆ. ಈ ಕೂಡಲೇ ಗೃಹಸಚಿವರು ರಾಜೀನಾಮೆ ನೀಡಬೇಕು. ಘಟನೆ ನಡೆಯುವ ಮೂರು – ನಾಲ್ಕು ದಿನದ ಮುಂಚಿತವಾಗಿ ಅವರು ನಾಗಮಂಗಲಕ್ಕೆ ಬಂದಿದ್ದರು. ಮುಸ್ಮಿಂ ಗುಂಡಾಗಳಿಗೆ ಹೇಳುತ್ತಿದ್ದೇನೆ, ಕೈಯಲ್ಲಿ ಕಲ್ಲು ಹಿಡಿಯಲು ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಅಂದುಕೊಳ್ಳಬೇಡಿ. ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ತಲವಾರು ಸಮೇತ 50 ಮಂದಿ ಶ್ರೀರಾಮ‌ಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ‌ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯ ಸರಕಾರದಿಂದ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಬೀತಾಗಿದೆ. ಅದಕ್ಕೆ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದರು.

Ad
Ad
Nk Channel Final 21 09 2023