ಮಂಗಳೂರು: ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಸುದ್ದಿ ಗೋಷ್ಟಿ ನಡೆಸಿ ಬೇರೆ ಬೇರೆ ರಾಜ್ಯದ ಚುನಾವಣಾ ಫಲಿತಾಂಶ ನೋಡಿದಾಗ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿ ಮಾಡಿದೆ. ಬಿಜೆಪಿ ಚುನಾವಣೆ ಮೊದಲು ಸುಳ್ಳು ವದಂತಿ ಹಬ್ಬಿಸಿದ್ರು, ಗ್ಯಾರಂಟಿ, ವಕ್ಫ್ ವಿಚಾರ ಮಾಡಿ ಅಪಪ್ರಚಾರ ನಡೆಸಿದ್ರು, ಚುನಾವಣೆಗಾಗಿ ಇಡಿ ಬಳಸಿಕೊಂಡಿದ್ದರು ಎಂದರು.
ಜಾರ್ಕಾಂಡ್ ನಲ್ಲಿ ಉತ್ತಮ ಗೆಲುವು ಸಿಕ್ಕಿದೆ.ಬಿಜೆಪಿ ನುಸುಳುಕೋರರ ಬಗ್ಗೆ ಅಪಪ್ರಚಾರ ನಡೆಸಿದ್ರು, ನುಸುಳುಕೋರರು ಬಂದಿದ್ದಾರೆ ಅಂತ ಬಿಜೆಪಿ ಸುಳ್ಳು ಹೇಳಿ ಸೈನಿಕರಿಗೆ ಅವಮಾನ ಮಾಡಿದರು ಎಂದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲು ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಂಟೇನರ್‌ನಲ್ಲಿ ದುಡ್ಡು ಬಂದಿದೆ. ನೋಟ್ ಎಣಿಸೋ ಮಷೀನ್ ಬಿಟ್ಟು ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ.ಕರ್ನಾಟಕದಲ್ಲೂ ದುಡ್ಡು ಖರ್ಚು ಮಾಡಿದ್ರು ಆದ್ರೆ ಜನ ಅದನ್ನು ತಿರಸ್ಕರಿಸಿದರು ಎಂದರು.
ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ಕರ್ನಾಟಕದಲ್ಲಿ ಹಣ ಹೆಂಡದಲ್ಲಿ ನಾವು ಕೂಡ ಬಿಜೆಗೆ ಪೈಪೋಟಿ ನೀಡಿದ್ದೇವೆ. ಚುನಾವಣೆಗಾಗಿ ಕರ್ನಾಟಕದಲ್ಲಿ ಹಣ ಹೆಂಡ ನೀಡಿದ್ದಾಗಿ ಬಿಕೆ ಹರಿಪ್ರಸಾದ್ ಒಪ್ಪಿಕೊಂಡಿದ್ದಾರೆ. ನಾವು ಸನ್ಯಾಸಿ ಅಲ್ಲ, ನಾವು ಕೂಡ ಅವರಿಗೆ ಸರಿಯಾಗಿ ಖರ್ಚಿ ಮಾಡಿದ್ದೇವೆ ಎಂದರು.
ಶಿಗ್ಗಾಂವಿಯಲ್ಲಿ ನಾವು ಕೊಟ್ಟಿರುವ ಕಾರ್ಯಕ್ರಮ ಗೆಲ್ಲಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಏನು ಹೇಳಿ ಆದ್ರೂ ನಂಬಿಸಲು ಪ್ರಯತ್ನ ಮಾಡುತ್ತಿದ್ರು, ಕಾಂಗ್ರೆಸ್ ಕ್ಕಿಂತ ಡಬಲ್ ಕುಟುಂಬ ರಾಜಕಾರಣ ಇರೋದು ಬಿಜೆಪಿಯಲ್ಲಿ. ಒಂದೊಂದು ಕುಟುಂಬದಲ್ಲಿ ಹತ್ತತ್ತು ಜನ ರಾಜಕಾರಣದಲ್ಲಿ ಇದ್ದಾನೆ ಎಂದರು.
ಸುಮ್ಮನೆ ಗೂಬೆ ಕೂರಿಸೋದು ಕಾಂಗ್ರೆಸ್ . ಅವರ ತಟ್ಟೆಯಲ್ಲಿ ಇರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೋಣ ನೋಡುತ್ತಿದ್ದಾರೆ. ನಾವು ಗೂಬೆ ಅಲ್ಲ ಅಂತ ಬಿಜೆಪಿಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಇಡಿ ಐಟಿ ಉಪಯೋಗಿಸಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮಾಡಿದೆ. ಮಾಧ್ಯಮದವರು ಎರಡೂವರೆ ವರ್ಷದಲ್ಲಿ ಸಿಎಂ ಬದಲಾಗುತ್ತಾರೆ ಅಂತ ಹೇಳುತ್ತಿದ್ದರು.
ಸಿದ್ದರಾಮಯ್ಯ ಸಿಎಂ ಬದಲಾಗುತ್ತಾರೆ ಅಂತ ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗುದಿಲ್ಲ. ಯಡಿಯೂರಪ್ಪನವರ ಸಹಿ ಮಾಡಿದ ಹಾಗೆ ಅಲ್ಲ ಸಿಎಂ ಬದಲಾವಣೆ. ಎಲೆಕ್ಷನ್ ಕಮಿಷನ್ ಬಿಜೆಪಿಯ ಅಂಗವಾಗಿ ಬಿಟ್ಟಿದೆ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.