Bengaluru 23°C
Ad

ಆಶ್ರಯ ಕಾಲೋನಿಯಲ್ಲಿ ಗೋ-ಮಾತೆ ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ

ಆಶ್ರಯ ಕಾಲೋನಿ ಸುತ್ತ ಮುತ್ತ ಪರಿಸರದ ಗೋ-ಮಾತೆ ಕಾಣೆಯದ ಬಗ್ಗೆ ನಡೆಸಿದ ಸಾಮೂಹಿಕ ಪ್ರಾರ್ಥನೆ ಮತ್ತು ಉಳ್ಳಾಲ ಠಾಣೆಗೆ ಸಾರ್ವಜನಿಕ ಮನವಿ ಅಭೂತ ಪೂರ್ವ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಉಳ್ಳಾಲ: ಆಶ್ರಯ ಕಾಲೋನಿ ಸುತ್ತ ಮುತ್ತ ಪರಿಸರದ ಗೋ-ಮಾತೆ ಕಾಣೆಯದ ಬಗ್ಗೆ ನಡೆಸಿದ ಸಾಮೂಹಿಕ ಪ್ರಾರ್ಥನೆ ಮತ್ತು ಉಳ್ಳಾಲ ಠಾಣೆಗೆ ಸಾರ್ವಜನಿಕ ಮನವಿ ಅಭೂತ ಪೂರ್ವ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಭೆಯಲ್ಲಿ ಸತೀಶ್ ಕುಂಪಲ ಭಾ.ಜ.ಪ.ಜಿಲ್ಲಾಧ್ಯಕ್ಷರು ದ.ಕ ಜನರ ಪರವಾಗಿ ಅರಕ್ಷಕರಿಗೆ ಮನವಿ ಮಾಡಿದರು.

ರವಿಶಂಕರ್ ಸೋಮೇಶ್ವರ ಉಪಾಧ್ಯಕ್ಷರು ಸೋಮೇಶ್ವರ ಪುರಸಭೆ ಪ್ರಸ್ತಾವಿಕವಾಗಿ ಮಾತನಾಡಿದರು. ಜಯಪೂಜಾರಿ ಪುರಸಭಾ ಸದಸ್ಯರು, ಸ್ವಪ್ನ ಶೆಟ್ಟಿ, ಮನುಕಟ್ಟೆಮನೆ, ದೇವಾನಂದ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯರು, ಪ್ರಸಾದ್ ಕುಂಪಲ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರು, ಪ್ರಮೋದ್ ಓಂ ಫ್ರಂಡ್ಸ್ ಅಧ್ಯಕ್ಷರು, ಯಶವಂತ್ ಶೆಟ್ಟಿ ವಾರ್ಡ್ ಅಧ್ಯಕ್ಷರು, ತಿಮ್ಮಯ್ಯ ಬೂತ್ ಅಧ್ಯಕ್ಷರು,

ವೇಣುಗೋಪಾಲ ಆರಕ್ಷಕ ಠಾಣಾ ಪರವಾಗಿ ಮನವಿ ಪಡೆದುಕೊಂಡರು, ಹಾಗೂ ಓಂ ಫ್ರೆಂಡ್ಸ್ ಸದಸ್ಯರು ಮತ್ತು ಆಶ್ರಯ ಕಾಲೊನಿಯ ನಾಗರಿಕರು ಈ ಸಂದರ್ಭದಲ್ಲಿ ಗೋ-ಮಾತೆಯ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸಿ ಮನವಿ ಮಾಡಿದರು, ಚೇತನ್ ಶೆಟ್ಟಿ ಸಭೆಯನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Ad
Ad
Nk Channel Final 21 09 2023