Bengaluru 23°C
Ad

ದಕ್ಷಿಣ ಕನ್ನಡದಲ್ಲಿ ಗೆಲುವಿನ ನಗೆ ಬೀರಿದ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ

Chowta (1)

ಮಂಗಳೂರು: ಕರಾವಳಿಯಲ್ಲಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿನ ನಗೆ ಬೀರಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಮ್ಮ ಪ್ರತಿಸ್ಪರ್ಧಿ ಕಾಂಗ್ರೇಸ್ ನ ಪದ್ಮರಾಜ್ ಅವರಿಗಂತ 1,38,288 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.

ಭಾರೀ ಪೈಪೋಟಿ ಕ್ಷೇತ್ರವಾಗಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೇಸ್ ಬಿಜೆಪಿಗೆ ಪ್ರಬಲ ಪೈಪೋಟಿ ಕೊಟ್ಟಿತ್ತು, ಆದರೆ ತಮ್ಮ ಭದ್ರಕೋಟೆಯಲ್ಲಿ ಮತ್ತೆ ಬಿಜೆಪಿ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸೀಟ್ ನ್ನು ಉಳಿಸಿಕೊಂಡಿದೆ. ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ರೋ ವರ್ಕೌಟ್ ಆಗಿದ್ದು ಬ್ರಿಜೇಶ್ ಗೆಲುವು ಸಾಧಿಸುವುದರ ಮೂಲಕ ದೆಹಲಿಗೆ ಹಾರಲು ತಯಾರಾಗಿದ್ದಾರೆ.

ಬಿಜೆಪಿಯ ಬ್ರಿಜೇಶ್ ಚೌಟ – 6,24,483 ಮತ ಗೆದ್ದರೆ, ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 4,86,195 ಮತ ಪಡೆದಿದ್ದಾರೆ. ಈ ಮೂಲಕ ಚೌಟ ಅವರು 1,38,288 ಮತಗಳ ಅಂತರದೀಮದ ಗೆಲುವು ಸಾಧಿಸಿದ್ದಾರೆ.

Ad
Ad
Nk Channel Final 21 09 2023
Ad