Bengaluru 24°C
Ad

ಕೈ ಅಭ್ಯರ್ಥಿ ಪದ್ಮರಾಜ್ ಆರ್ ವಿರುದ್ಧ ಗೆದ್ದು ಬೀಗಿದ ಕ್ಯಾ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಫಸ್ಟ್‌ ರಿಯಾಕ್ಷನ್‌

Chowta (2)

ಮಂಗಳೂರು: ಕರಾವಳಿಯಲ್ಲಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಮ್ಮ ಪ್ರತಿಸ್ಪರ್ಧಿ ಕಾಂಗ್ರೇಸ್ ನ ಪದ್ಮರಾಜ್ ಅವರಿಗಂತ 1,42,634 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಬ್ರಿಜೇಶ್ ಚೌಟ ಅವರು, ಇದು ನನ್ನ ಗೆಲುವು ಅಲ್ಲ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯ ಕಾರ್ಯಕರ್ತರ ಗೆಲುವು. ಇದು ನಮ್ಮ ವಿಚಾರ ಹಿಂದುತ್ವದ ಗೆಲವು. ಬಿಜೆಪಿಯ ಅಧ್ಯಕ್ಷರಿಂದ ಹಿಡಿದು ಭೂತ್‌ ಮಟ್ಟದ ಕಾರ್ಯಕರ್ತರವಗೆಗಿನ ನಮ್ಮೆಲ್ಲ ಸಂಘಟನೆಯ ಗೆಲುವು. ತುಳುನಾಡಿನ ಮಣ್ಣಿ ನಲ್ಲಿ ಸತ್ಯ ಧರ್ಮ ನ್ಯಾಯಾದ ಆಧಾರದಲ್ಲಿ ಹಿಂದುತ್ವದ ಆಧಾರದಲ್ಲಿ ಚುನಾವಣೆಯನ್ನು ಎದುರಿಸಿದ್ದೇವೆ.

ಇಂದು ಹಿಂದುತ್ವಕ್ಕೆ ಗೆಲುವಾಗಿದೆ. ದೈವ ದೇವರ ಆಶೀರ್ವಾದದಿಂದ ಕಾರ್ಯಕರ್ತರ ಬಲದಿಂದ ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಕೇಂದ್ರ ನಾಯಕರ ಬೆಂಬಲದಿಂದ ನಾವು ಚುನಾವಣೆಯಲ್ಲಿ ಗೆದಿದ್ದೆವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಬದ್ದತೆಯನ್ನು ಹಿಡಿದುಕೊಂಡು ಈ ಜಿಲ್ಲೆಯಲ್ಲಿ ಹೊಸ ಪರ್ವವನ್ನು ಹೊಸ ಕನಸುಗಳನ್ನು ಅಭಿವೃದ್ಧಿಯನ್ನು ಜನರ ಮುಂದೆ ಗುರುತಿಸಲು ಅವರೆಲ್ಲ ಸಹಕಾರದೊಂದಿಗೆ ಈ ಜಿಲ್ಲೆಯನ್ನು ಅಭಿವೃದ್ದಿಯ ಜೊತೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದರು.

Ad
Ad
Nk Channel Final 21 09 2023
Ad