ಧರ್ಮಸ್ಥಳ: ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಬಿಟ್ಟದ್ದು, ಅವಶ್ಯಕತೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿ ಮಾಡ್ತಾರೆ. ಸಚಿವ ಸಂಪುಟ ಪುನಾರಚನೆ ಆಗಬೇಕು ಅನಿಸಿದ್ರೆ ಮಾಡ್ತಾರೆ ಎಂದು ಧರ್ಮಸ್ಥಳದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ವಿಕ್ರಂ ಗೌಡ ಎನ್ಕೌಂಟರ್ ನಂತರ ಇನ್ನೂ ಹೆಚ್ಚಿನ ಕಾರ್ಯಾಚರಣೆ ಆಗ್ತಾ ಇದೆ. ನಕ್ಸಲರಿಗೆ ಶರಣಾಗತಿ ಆಗಲು ಮನವಿ ಮಾಡಿದ್ದೇವೆ, ಶರಣಾಗತಿ ಆದ್ರೆ ಅವರಿಗೆ ಪ್ಯಾಕೇಜ್ ಮಾಡಿದ್ದೇವೆ. ನಮ್ಮ ಸಮಾವೇಶಕ್ಕೆ ಯಾರೂ ವಿರೋಧ ಮಾಡಿಲ್ಲ. ಬಿಜೆಪಿ ನಮ್ಮ ಮೇಲೆ, ಪಕ್ಷದ ಮೇಲೆ ಅನಾವಶ್ಯಕ ಟೀಕೆ ಟಿಪ್ಪಣಿ ಮಾಡ್ತಾ ಇದೆ. ಅದಕ್ಕೆ ಉತ್ತರವಾಗಿ ಸಮಾವೇಶದ ಮೂಲಕ ಉತ್ತರ ಕೊಡ್ತೇವೆ ಎಂದರು.
ಸಿಪಿಎಂ ಹೆದ್ದಾರಿ ಪ್ರತಿಭಟನೆಗೆ ಅನುಮತಿ ನಿರಾಕರಣೆ ವಿಚಾರ. ಪ್ರತಿಭಟನೆ ಯಾರು ಬೇಕಾದರೂ ಮಾಡಬಹುದು, ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಬಾರದು. ಪೊಲೀಸರಿಗೆ ಶಿಸ್ತು ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಇರುತ್ತದೆ. ಗಲಾಟೆ ಮಾಡ್ತಾರೆ ಅಂತೆಲ್ಲಾ ಪೊಲೀಸರಿಗೆ ಮಾಹಿತಿ ಇದ್ದರೆ ಅನುಮತಿ ಕೊಡಲ್ಲ ಎಂದರು.