ಮಂಗಳೂರು: ಉಪ ಚುನಾವಣೆಯ ಫಲಿತಾಂಶ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಎಕ್ಸಿಟ್ ಪೋಲ್ ಫಲಿತಾಂಶ ಗಂಭೀರವಾಗಿ ಪರಿಗಣಿಸುದಿಲ್ಲ. ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ರಾಜ್ಯದಲ್ಲಿ ಪಡಿತರ ಚೀಟಿ ರದ್ದು ವಿಚಾರವಾಗಿ ಮಾತನಾಡಿ, ಕೆಲವು ಕಡೆ ಬಡತನ ರೇಖೆಗಿಂತ ಕಡಿಮೆ ಇರುವ 80/90 ಪರ್ಸೆಂಟ್ ರದ್ದಾಗಿರುವ ಬಗ್ಗೆ ಆರೋಪ ಮಾಡಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಅದು ಸಾಧ್ಯವಿಲ್ಲ. ಅನರ್ಹ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಸೇರಿದಂತೆ ಇತರ ಮಾನದಂಡ ಆದರಿಸಿ ಕಾರ್ಡ್ ರದ್ದು ಪಡಿಸಲಾಗಿದೆ ಅಂತ ಸಿಎಂ ಸ್ಪಷ್ಟ ಪಡಿಸಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಅದೇ ಹೇಳಿದ್ದು ಆಹಾರ ಸಚಿವರ ಅದೇ ಹೇಳಿದ್ದು, ಕೆಲವು ತಪ್ಪು ಆಗಿದೆ ಅದನ್ನು ಸರಿಸಡಿಸುತ್ತೇವೆ. ತಪ್ಪಾಗಿರೋದು ಸರಿಪಡಿಸಲೇ ಬಾರದು ಅನ್ನೋದು ಯಾವ ಲಾಜಿಕ್. ಕೇಂದ್ರ ಸರ್ಕಾರ 5.80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ವಿಚಾರ ಯಾಕೆ ಬಿಜೆಪಿ ಮಾತಾಡುತ್ತಿಲ್ಲ?. ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು ಎಂದರು.
ಮಾಧ್ಯಮ ಕೂಡ ಇದನ್ನು ತಿಳಿದು ಹೇಳಬೇಕು. ಗೃಹ ಲಕ್ಷ್ಮಿ ಯೋಜನೆಗೂ ಪಡಿತರಕ್ಕೂ ಯಾವುದೇ ಸಂಬಂಧ ಇಲ್ಲ. ಕೆಲವು ಪಡಿತರ ರದ್ದು ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದೆ ಅದನ್ನು ಸರ್ಕಾರ ಸರಿ ಮಾಡುತ್ತೆ. ವ್ಯವಸ್ಥೆ ಸುಧಾರಣೆ ಮಾಡುವಾಗ ಸ್ಪಲ್ಪ ಸಮಸ್ಯೆ ಬರುತ್ತೆ, ಅದನ್ನು ಸರಿ ಪಡಿಸುತ್ತೇವೆ ಎಂದರು.
ಮೂಡ ಹಗರಣದಲ್ಲಿ ಸಿಎಂ ಗೆ ಇಡಿ ನೋಟಿಸ್ ?. ಕೇಂದ್ರ ಸರ್ಕಾರ ಇಡಿ, ಸಿಬಿಐ ಯನ್ನು ದಾಳಗಳಾಗಿ ಬಳಸುತ್ತಿದ್ದಾರೆ. ಇಡಿ ಬಿಜೆಪಿಯ ಅಂಗ ಸಂಸ್ಥೆ ಯಾಗಿದೆ. ನೈತಿಕತೆ ಉಳಿದುಕೊಂಡಿಲ್ಲ, ಇದು ದುರ್ದೈವ. ನೋಟಿಸ್ ಕೊಡೋದು ಅಪಪ್ರಚಾರ ಮಾಡಿಸೋದು, ವಿರೋಧ ಪಕ್ಷವನ್ನು ಸೋಲಿಸಲು, ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇಡಿಯನ್ನು ಬಳಸುತ್ತಿದೆ.
ನಬಾರ್ಡ್‌ನಲ್ಲಿ 2500 ಕೋಟಿ ಕಡಿತವಾಗಿದೆ ಇದು ಪ್ರಮುಖ ವಿಚಾರವಾಗಿದೆ. ಪ್ರಹ್ಲಾದ್ ಜೋಶಿ ಇದರ ಬಗ್ಗೆ ಮಾತಾಡಲಿ. ಕೇಂದ್ರ ಸಚಿವರ ಜೊತೆ ಮಾತಾಡುತ್ತೇನೆ ಅಂತ ಹೇಳಲು ಅವರಿಗೆ ಬಾಯಿ ಬರುದಿಲ್ಲ. ಕೇಂದ್ರಕ್ಕೆ ಬಿಜೆಪಿಯವರು ಗುಲಾಮರಾಗುತ್ತಿದ್ದಾರೆ.
ಆಸ್ಪತ್ರೆಯಲ್ಲಿ 20 ಶೇಕಡಾ ಶುಲ್ಕ ಹೆಚ್ಚಳ ವಿಚಾರವಾಗಿ ಮಾತನಾಡಿ, ಸೇವಾ ಶುಲ್ಕ ಆಸ್ಪತ್ರೆಗೆ ಹೋಗುತ್ತೆ, 10 ಇದನ್ನು 15 ರಿಂದ 20 ಶೇಕಡಾ ಹೆಚ್ಚಿಸಿದ್ದಾರೆ. ಸಣ್ಣ ಪರಿಷ್ಕರಣೆ ಮಾಡಿದ್ದಾರೆ ಅಷ್ಟೇ, ಅದು ಸರ್ಕಾರಕ್ಕೆ ಹೋಗಲ್ಲ, ಅದು ಗ್ಯಾರಂಟಿ ಹೋಗಲ್ಲ. ಗ್ಯಾರಂಟಿಗೂ ಶುಲ್ಕ ಪರಿಷ್ಕರಣೆಗೆ ಲಿಂಕ್ ಇಲ್ಲ. ಬಡವರಿಗೆ ತೊಂದರೆ ಆಗುವ ರೀತಿಯಲ್ಲಿ ಏನು ಆಗುದಿಲ್ಲ. ಅಲ್ಪ ಪ್ರಮಾಣದಲ್ಲಿ ಮಾಡಿದ್ದಾರೆ ಅಷ್ಟೇ ಎಂದರು.
ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ತಿಳಿದು ಮಾತಾಡುತ್ತೇನೆ, ಇದು ಗಂಭೀರ ವಿಚಾರ, ನಕ್ಸಲನ್ನು ಮುಖ್ಯ ವಾಹಿನಿಗೆ ತರುವ ಕೆಲಸ ನಡೆದಿದೆ. ತೀವ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ. ನಾವು ಯಾರನ್ನು ಕೊಂದು ಹಾಕುವ ಉದ್ದೇಶ ಇಲ್ಲ ಎಂದು ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.