Bengaluru 22°C
Ad

ದಕ್ಷಿಣ ಕನ್ನಡ: ಪದ್ಮರಾಜ್ ವಿರುದ್ಧ ಬ್ರಿಜೇಶ್ ಚೌಟ ಗೆಲುವಿನ ಸಾಧ್ಯತೆ !

Brijesh Chowta Padmaraj

ಮಂಗಳೂರು: ಬಿಜೆಪಿಯ ಭದ್ರ ಕೋಟೆ ಎಂದೇ ಹೇಳಲಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದು, ಸತತ ಗೆಲುವಿನ ಓಟವನ್ನು ಕಮಲ ಪಡೆ ಮುಂದುವರಿಸುವ ಸುಳಿವು ದೊರೆತಿದೆ.

ಕಾಂಗ್ರೆಸ್​ ಅಭ್ಯರ್ಥಿ ಪದ್ಮರಾಜ್ ವಿರುದ್ಧ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿನತ್ತ ಮುನ್ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ಅವಧಿಗಳಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದು ಬೀಗಿದೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಜನಾಕ್ರೋಶ, ಪಕ್ಷದ ಆಂತರಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾದ ಕಾರಣ ಬಿಜೆಪಿ ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿತ್ತು.

ಈ ಲೋಕಸಭೆ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ 66,440 ರಷ್ಟು ಮತಗಳು ಹೆಚ್ಚಾಗಿವೆ. ಕ್ಷೇತ್ರದಲ್ಲಿ 2019ರಲ್ಲಿ 13,43,213 ಮತಗಳು ಚಲಾವಣೆಯಾಗಿದ್ದರೆ, ಈ ಬಾರಿ 14,09,653 ಮತಗಳು ಚಲಾವಣೆಯಾಗಿವೆ.

ಇನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16 ಚುನಾವಣೆಗಳು ನಡೆದಿವೆ. ಈವರೆಗೆ 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 9 ಬಾರಿ ಗೆಲುವು ಸಾಧಿಸಿದೆ.

 

Ad
Ad
Nk Channel Final 21 09 2023
Ad