ಮಂಗಳೂರು: ಮಂಗಳೂರಿನ ಹಂಪನ್ ಕಟ್ಟೆ ಜಂಕ್ಷನ್ ನಲ್ಲಿ ಕೆನರಾ ಜೂವೆಲ್ಲೆರ್ಸ್ ನ ಎದುರು ಮೂಡಬಿದ್ರಿಯ ಎಸ್ ಕೆ ಎಫ್ ಎಲ್ಲಿಕ್ಸರ್ ರವರು ಸಾರ್ವಜನಿಕರಿಗೆ ಕುಡಿಯುವ (ತಂಪು ಸಾದ, ಬಿಸಿ) ನೀರಿನ ವ್ಯವಸ್ಥೆಯನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಸ್ವಾತಂತ್ರ ದಿನದಂದು ಬೆಳಿಗ್ಗೆ ಉದ್ಘಾಟಿಸಿದರು. ಮಂಗಳೂರಿನ ಹೃದಯಭಾಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಭಾರತದ ಸ್ವಾತಂತ್ಯೋತ್ಸವ ಪುಣ್ಯದ ದಿನದಂದು ಮಾಡಿದ ಎಸ್ ಕೆ ಎಫ್ ಎಲ್ಲಿಕ್ಸರ್ ಇವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ವೇದವ್ಯಾಸ ಡಿ ಕಾಮತ್, ಮ ನ ಪಾ ಮೇಯರ್ ಸುಧೀರ್ ಶೆಟ್ಟಿ ಶುಭ ಹಾರೈಸಿದರು. ಎಸ್ ಕೆ ಎಫ್ ಎಲ್ಲಿಕ್ಸರ್ ಆಡಳಿತ ನಿರ್ದೇಶಕರಾದ ಡಾ. ಜಿ ರಾಮಕೃಷ್ಣ ಆಚಾರ್ ಸ್ವಚ್ ಭಾರತ್ , ಪ್ಲಾಸ್ಟಿಕ್ ಮುಕ್ತ ,ಯೋಜನೆ ಅನುಷ್ಠಾನ ಗೊಳಿಸುವ ಯೋಜನೆಯಲ್ಲಿ ಒಂದಾದ ನೀರನ್ನು ಸಾರ್ವಜನಿಕರಿಗೆ ನೀಡುವ ಸಧುದ್ದೇಶದಿಂದ ಈ ಒಂದು ಕುಡಿಯುವ ನೀರಿನ ವ್ಯವಸ್ಥೆ ಎಸ್ ಕೆ ಎಫ್ ಎಲ್ಲಿಕ್ಸರ್ ಮಾಡಿದೆ ಎಂದರು.
ಕೆನರಾ ಜೂವೆಲ್ಲೆರ್ಸ್ ನ ಧನಂಜಯ ಪಾಲ್ಕೆ 1905 ನೇ ಇಸವಿಯಲ್ಲಿ ಅಪ್ಪಣ್ಣ ಎಂಬವರು ಇದೇ ಜಾಗದಲ್ಲಿ ಬಾವಿಯಿಂದ ನೀರು ಎಳೆದು ಸಾರ್ವಜನಿಕರಿಗೆ ನೀರು ನೀಡುತ್ತಿದ್ದರು ಅಪ್ಪಣ್ಣ ಕಟ್ಟೆ ಇದ್ದುದು ಬ್ರಿಟಿಷರ ಕಾಲದಲ್ಲಿ ಹಂಪನ್ ಕಟ್ಟೆ ಎಂದು ಆಯಿತು. ಇಂದಿನ ಆಧುನಿಕ ಯುಗದಲ್ಲೂ ಪಾರಂಪರಿಕ ಬಾವಿಕಟ್ಟೆ ಯನ್ನು ಉಳಿಸಿಕೊಂಡು ಎಸ್ ಕೆ ಎಫ್ ಎಲ್ಲಿಕ್ಸರ್ ನವರು ನೀಡಿದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಇದಕ್ಕೆ ನಿರಂತರ ನೀರು ಸರಬರಾಜನ್ನು ಕೆನರಾ ಜೂವೆಲ್ಲೆರ್ಸ್ ವತಿಯಿಂದ ಯಿಂದ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಎಸ್ ಕೆ ಎಫ್ ಎಲ್ಲಿಕ್ಸರ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಡಾ. ಲಕ್ಷ್ಮೀಶ್ ರೈ, ಎಕ್ಸಕ್ಯೂಟಿವ್ ಡೈರೆಕ್ಟರ್ ವಿಜಿತ್ ಜೈನ್, ಮಾರ್ಕೆಟಿಂಗ್ ಮ್ಯಾನೇಜರ್ ಶ್ರುತಿ ವಿ ಸಾಲಿಯಾನ್ ಟೆಕ್ನಿಷಿಯನ್
ಸುಕೇಶ್, ಬಿ ಜೆ ಪಿ ಮುಖಂಡರಾದ ಸಂಜಯ ಪ್ರಭು, ಬಿ ಮೋಹನ್, ಮಾಜಿ ಕಾರ್ಪೊರೇಟರ್ ರಂಗನಾಥ್ ಕಿಣಿ ಕೆನರಾ ಜೂವೆಲ್ಲೆರ್ಸ್ ನ ಉದ್ಯೋಗಿಗಳು ಹಾಗೂ ಸ್ವರ್ಣ ಶಿಲ್ಪಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು