ಮಂಗಳೂರು: ಮಂಗಳೂರಿನ ಪ್ರಸಿದ್ಧ ಪೊಳಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಬಂದ್ ಮಾಡಲಾಗಿದೆ. ಸೇತುವೆ ದುರಸ್ಥಿ ಹಿನ್ನಲೆ ಘನವಾಹನ ಸಂಚಾರ ಬಂದ್ ಮಾಡಲಾಗಿದೆ. ಇತ್ತ ಬಂದ್ ವಿರುದ್ಧ ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರು ಹೊರವಲಯದಲ್ಲಿರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರ ಆಗಮಿಸಿತ್ತಾರೆ. ದುರಸ್ಥಿ ಹಿನ್ನಲೆ ಸೇತುವೆಯಲ್ಲಿ ಘನವಾಹನಕ್ಕೆ ನಿಷೇಧ ಹೇರಿರುವ ಜಿಲ್ಲಾಡಳಿತ ವಿರುದ್ಧ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸೇತುವೆ ಬಂದ್ ಮಾಡಲಾಗಿದೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಫಲ್ಗುಣಿ ಸೇತುವೆ ಬಂದ್ ಪರಿಣಾಮ ಶಾಲ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಕೂಲಿ ಕಾರ್ಮಿಕರಿಗೂ ಸಂಕಷ್ಟತಂದೊಡ್ಡಿದೆ.ಆದ್ದರಿಂದ ಶೀಘ್ರ ಸೇತುವೆಯನ್ನ ಸಂಚಾರಕ್ಕೆ ಮುಕ್ತವಾಗಿಸಬೇಕು ಎಂದು ಅಗ್ರಹಿಸಿದ್ದು,ಇಲ್ಲದಿದ್ರೆ ಸ್ಥಳೀಯರಿಂದ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Ad