ದಕ್ಷಿಣ ಕನ್ನಡ : ಮಂಗಳೂರು ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿ 7ರಂದು ಮಧ್ಯಾಹ್ನ 1ಕ್ಕೆ ಷಷ್ಠಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಈಗಾಗಲೇ ಡಿ.2 ರಂದು ಬೆಳಗ್ಗೆ ಪ್ರಾರ್ಥನೆಯೊಂದಿಗೆ ಕೊಪ್ಪರಿಗೆ ಮುಹೂರ್ತ,
ಮಧ್ಯಾಹ್ನ ಮಹಾಪೂಜೆ, ರಾತ್ರಿ ಮಯೂರ ವಾಹನೋತ್ಸವ, 3ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ವೃಷಭ ವಾಹನೋತ್ಸವ, 4 ರಂದು ರಾತ್ರಿ ವಿಶೇಷವಾದ ಸರ್ವ ವಾಹನೋತ್ಸವ, 5ರಂದು ಬೆಳಗ್ಗೆ ಗಣಹೋಮ, ರಾತ್ರಿ ಕಟ್ಟೆ ಪೂಜೆಗಳು, ಗಜವಾಹನೋತ್ಸವ ನಡೆದಿದೆ .
6 ರಂದು ಪಂಚಮಿ, ಬೆಳಗ್ಗೆ ಅಂಗಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಕಟ್ಟೆಪೂಜೆಗಳು, ಗರುಡ ವಾಹನೋತ್ಸವ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ 7 ರಂದು ಷಷ್ಠಿ, ಬೆಳಿಗ್ಗೆ ರಥ ಕಲಶ, ಮದ್ಯಾಹ್ನ 1ಕ್ಕೆ ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ ಹಾಗೂ 8ರಂದು ಬೆಳಗ್ಗೆ 7ಕ್ಕೆ ಅತೀ ವಿಶಿಷ್ಟವಾದ ಜೋಡು ದೇವರ ಬಲಿ ಉತ್ಸವ, ಚಂದ್ರ ಮಂಡಲ ಉತ್ಸವ, ಪಾಲಕಿ ಉತ್ಸವ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.