Bengaluru 24°C
Ad

ರಾಜ್ಯ ಸರಕಾರದ ನಡೆಯ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

ರಾಜ್ಯ ಸರಕಾರದ ನಡೆಯ ವಿರುದ್ಧ ಮಂಗಳೂರಿನಲ್ಲಿ ಮಿನಿ‌ ವಿಧಾನ ಸೌಧದ ಮುಂಭಾಗ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು : ರಾಜ್ಯ ಸರಕಾರದ ನಡೆಯ ವಿರುದ್ಧ ಮಂಗಳೂರಿನಲ್ಲಿ ಮಿನಿ‌ ವಿಧಾನ ಸೌಧದ ಮುಂಭಾಗ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಬಿಜೆಪಿ ಕಾರ್ಯಕರ್ತರು, ನಾಯಕರು ಭಾಗಿಯಾಗಿದ್ದಾರೆ.

Ad

ವಕ್ಫ್ ಪ್ರತಿಭಟನೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿದ್ದರಾಮಯ್ಯರಿಗೆ ಸಹಕಾರ ಕೊಡ್ತಿರೋ ಜಮೀರ್ ಅಹ್ಮದ್ ವಕ್ಫ್ ಆಸ್ತಿ ಕಬಳಿಸಲು ಯತ್ನಿಸ್ತಿದ್ದಾರೆ. ಮಂಗಳೂರಿನ ಎರಡು ಮಸೀದಿಯ ಆಡಳಿತದವರು ಒಮ್ಮೆ ನನ್ನ ಭೇಟಿಯಾಗಿದ್ದರು. ಅವರ ಮಸೀದಿಯ ಕಮರ್ಷಿಯಲ್ ಜಾಗದ ಬಾಡಿಗೆ ಯಾರೋ ತಿನ್ನುತ್ತಿದ್ದಾರೆ ಹೇಳಿದ್ರು, ಅದನ್ನ ನಮಗೆ ವಾಪಸ್ ತೆಗೆಸಿಕೊಡಿ ಅಂತ ಮನವಿ ಮಾಡಿದರು.

Ad

ಅಂದರೆ ಸರ್ಕಾರದ ವಕ್ಳ್ ಆಸ್ತಿಯ ಜಾಗದ ಬಾಡಿಗೆ ಹಣ ಬೇರೆಯವರ ಪಾಲಾಗುತ್ತಿತ್ತು. ದ.ಕ ಜಿಲ್ಲೆಯಲ್ಲಿ ನಿಮ್ಮ ಆಸ್ತಿಪಾಸ್ತಿ ನಿಮ್ಮ ಹೆಸರಿನಲ್ಲಿದ್ಯಾ ನೋಡಿ, ಈ ಕಾಂಗ್ರೆಸ್ ಯಾರ ಹೆಸರಲ್ಲಾದ್ರೂ ಮಾಡಿರಬಹುದು, ಹಾಗಾಗಿ ನೋಡಿ, ಸಿದ್ದರಾಮಯ್ಯ ನಾಚಿಕೆ ಆಗಬೇಕು, ನಿಮಗೆ ಮಾನಮರ್ಯಾದೆ ಇದ್ಯಾ?. ಹೀಗೆ ಬದುಕೋದಕ್ಕಿಂತ ಮಂಗಳೂರಿನ ಕ್ಲಾಕ್ ಟವರ್ ಎದುರು ಭಿಕ್ಷೆ ಬೇಡಿ ಜೀವನ ಮಾಡಿ ಎಂದರು.

Ad
Ad
Ad
Nk Channel Final 21 09 2023