ಪುತ್ತೂರು: ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮ ವಿರೋಧಿಸಿ ಪುತ್ತೂರಿನ ದರ್ಬೆ ವೃತ್ತದ ಬಳಿ ಪುತ್ತೂರು ಬಿಜೆಪಿ ಮಂಡಲ ಪ್ರತಿಭಟನೆ ನಡೆಸಿದರು. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು.
Ad
ಸಿದ್ದರಾಮಯ್ಯ ಸರ್ಕಾರ ಒಂದೂವರೆ ವರ್ಷದಲ್ಲಿ ಮಾಡಿರೋದು ಎಲ್ಲಾ ಭ್ರಷ್ಟಾಚಾರ. ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಯಾವತ್ತಿಗೂ ಹೋರಾಟ ಮಾಡುತ್ತನೇ ಇರುತ್ತದೆ. ಸಿದ್ದರಾಮಯ್ಯ ಅವರದ್ದು ದಪ್ಪ ಚರ್ಮದ ಸರ್ಕಾರ ಎಂದು ಪುತ್ತೂರು ಬಿಜೆಪಿ ಟೀಕಿಸಿತು.
Ad
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬೂಡಿಯಾರ್ ರಾಧಾಕೃಷ್ಣ ರೈ, ಶಿವಕುಮಾರ್, ಮುರಳೀಕೃಷ್ಣ ಹಸಂತಡ್ಕ, ಪ್ರಸನ್ನ ಮಾರ್ತ,ಜೀವಂಧರ್ ಜೈನ್,ವಿದ್ಯಾ ಗೌರಿ, ಡಾ.ಕೃಷ್ಣ ಪ್ರಸನ್ನ,ನಗರ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಅಧ್ಯಕ್ಷ ದಯಾನಂದ ಶೆಟ್ಟಿ,ನಿತೇಶ್ ಶಾಂತಿವನ, ನಗರಸಭೆ ಅಧ್ಯಕ್ಷೆ ಲೀಲಾವತಿ ನಾಯ್ಕ್,ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕರಿಯಲಾ, ಭಾಗಿಯಾಗಿದ್ದರು.
Ad
Ad