ಮಂಗಳೂರು: ಮುಂದೊಂದು ದಿನ ಹಿಂದೂಗಳು ಸುನ್ನತ್ ಮಾಡಿಕೊಳ್ಳುವ ಸಂದರ್ಭ ಬರಬಹುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ವಿಚಾರ ಇದೀಗ ಮಂಗಳೂರಿನಲ್ಲಿ ಸದ್ದು ಮಾಡ್ತಿದೆ.
Ad
ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ ರೀತಿಯ ರಾಜಕಾರಣ ಮಾಡದಿದ್ದರೆ, ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು. ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Ad
ಹೇಳಿಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಪೊಸ್ಟ್ ಗಳು ಶಾಸಕರ ವಿರುದ್ಧ ವೈರಲ್ ಆಗಿತ್ತು. ಇದರ ಮಧ್ಯೆ ಸುನ್ನತ್ ಮಾಡಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಫೋಟೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
Ad
Ad