ಮಂಗಳೂರು: ಇವತ್ತು ಅಮಾಯಕರು ಹೋಗ್ತಾ ಇದ್ದ ಬಸ್ ನ ಮೇಲೆ ಕಲ್ಲು ಹೊಡೆದಿದ್ದಾರೆ. ಬಾಂಗ್ಲಾದಲ್ಲಿ ಆಗೋ ಘಟನೆಯ ರೀತಿಯ ಆರಂಭವೇ ಇಲ್ಲಿ ಬಸ್ ಗೆ ಕಲ್ಲು ಹೊಡೆದಿರೋದು ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಲ್ಲು ತೂರಾಟ ವಿಚಾರವಾಗಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಅವರದ್ದೇ ಪೊಲೀಸರು, ಅವರದ್ದೇ ಕಾರ್ಯಕರ್ತರು ಎಲ್ಲರೂ ಇರೋದು. ಈಗ ಬಸ್ ಗೆ ಕಲ್ಲು ತೂರುವ ಮೂಲಕ ಗಲಾಟೆ ಮಾಡಿದ್ದಾರೆ. ಐವನ್ ಡಿಸೋಜಾ ಒಂದು ಹೆಜ್ಜೆ ಮುಂದೆ ಹೋಗಿ ಬಾಂಗ್ಲಾ ಮಾದರಿ ಬಗ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಹಾಗೂ ಅವರ ತಂಡ ಇದರ ಹಿಂದೆ ಇದೆ. ಭಾರತದಲ್ಲಿ ಬಾಂಗ್ಲಾ ಮಾದರಿ ಆಗುತ್ತೆ ಅಂತ ಅವರು ಹಿಂದೆಯೂ ಹೇಳಿದ್ದಾರೆ. ಅದರೆ ಐವನ್ ಕರ್ನಾಟಕದಲ್ಲಿ ಬಾಂಗ್ಲಾ ಮಾದರಿ ಬಗ್ಗೆ ಹೇಳಿದ್ದಾರೆ.ಬಸ್ ಗೆ ಕಲ್ಲು ತೂರಿದ್ದು ಪ್ರತಿಭಟನೆ ಮಾಡಿದ ಅವರದ್ದೇ ಕಾರ್ಯಕರ್ತರು.
ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲಿ. ಅವರ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕಿ ಬಂಧಿಸಲಿ. ಇವತ್ತಿನ ಘಟನೆ ಬಗ್ಗೆ ಕ್ರಮ ಏನಾಗುತ್ತೆ ಅಂತ ನಾವೂ ನೋಡ್ತೇವೆ. ಅವರ ನಾಯಕರು ಹೇಳಿದಂತೆ ಬಾಂಗ್ಲಾ ಮಾದರಿಗೆ ಯತ್ನಿಸ್ತಿದಾರೆ. ಅವರದ್ದೇ ಸರ್ಕಾರ ಇದ್ರೂ ಬಸ್ ಗಳ ಮೇಲೆ ಕಲ್ಲು ಹೊಡೀತಾ ಇದಾರೆ ಎಂದಿದ್ದಾರೆ.