ಮಂಗಳೂರು: ರಕ್ಷಕ- ಶಿಕ್ಷಕ ಸಮಿತಿ ಭಗವತೀ ಶಾಲೆ ಸಂಕೋಳಿಗೆಯ ವತಿಯಿಂದ ಆಟಿದ ಕೂಡಾಟಿಕೆಡ್ ಒಂಜಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಗಸ್ಟ್ 05ರ ಸೋಮವಾರ ಬೆಳಿಗ್ಗೆ 10-30 ರಿಂದ ಶ್ರೀಮತಿ ಕವಿತ ಸುರೇಶ್ ಇವರ ಮನೆಯಲ್ಲಿ ನಡೆಯಿತು.ಕಾರ್ಯಕ್ರಮನ್ನು ಭಗವತೀ ಶಾಲೆಯ ಮುಖ್ಯ ಶಿಕ್ಷಕರು ಆದ ಶ್ರೀಮತಿ ಸುರೇಖ ಜಯಪ್ರಕಾಶ್ ಮತ್ತು ಶ್ರೀಮತಿ ಪ್ರಮೀಳಾ ಶಾಂತರಾಮ್ ಹಾಗೂ ಮನೆಯ ಹಿರಿಯರು ಆದ ಶ್ರೀ ಪದ್ಮನಾಭ ಮತ್ತು ಶ್ರೀಮತಿ ಕಸ್ತೂರಿ ಪದ್ಮನಾಭ ಇವರು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸದಸ್ಯರ ಮನೆಯವರು ಸಿದ್ಧ ಪಡಿಸಿರುವ ಆಟಿ ತಿಂಗಳ ಸುಮಾರು36 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಕಾರ್ಯಕ್ರಮದಲ್ಲಿ ಭಗವತೀ ಶಾಲೆಯ ಪೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅದ್ಯಕ್ಷರಾದ ಶ್ರೀಮತಿ ಸುನೀತ ಮತ್ತು ಶ್ರೀಮತಿ ಅಮೃತ ಸದಸ್ಯರಾದ ಕವಿತ ಸುರೇಶ್,ಕವಿತ ಶೆಟ್ಟಿ, ಪ್ರಪುಲ್ಲ,ಲಕ್ಷ್ಮಿ, ವನಿತ,ಸಬನ,ಪದ್ಮಿನಿ,ಕುಶಲ,ಸುವ್ಯ ಶೆಟ್ಟಿ, ಸಬಿತ,ಪೂಜಾ, ರೇಣುಕಾ, ಜಯಲಕ್ಷ್ಮಿ,ಸೌಮ್ಯ. ಎಸ್, ಜ್ಯೋತಿ, ಸೌಮ್ಯ, ಚಿತ್ರ, ಹಸನ್,ರವಿಕಿರಣ್,ಅಶ್ರಪ್ ಉಪಸ್ಥಿತಿ ಇದ್ದರೂ. ರಕ್ಷಕ ಶಿಕ್ಷಕ ಪ್ರಾಥಮಿಕ ವಿಭಾಗದ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಬಸ್ತಿ ಕಾರ್ಯಕ್ರಮವನ್ನು ಸ್ವಾಗತಿಸಿ,ನಿರೂಪಣೆ ಮಾಡಿದರು.