ಮಂಗಳೂರು : ತಿಂಗಳ ಹಿಂದೆ 200 , 250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ! ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ಹೌದು, ಮೀನುಪ್ರಿಯರ ನೆಚ್ಚಿನ ಬಂಗುಡೆ ಮೀನು ಪ್ರಸ್ತುತ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ದರಕ್ಕೆ ಲಭ್ಯವಾಗುತ್ತಿದೆ. ಹೆದ್ದಾರಿ ಬದಿ ಅಲ್ಲಲ್ಲಿ ವ್ಯಾಪಾರಿಗಳು ಬಂಗುಡೆಯನ್ನೇ ಮಾರಾಟ ಮಾಡು ತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ದೊಡ್ಡ ಗಾತ್ರದ ಬಂಗುಡೆಗಳೂ ಮಾರುಕಟ್ಟೆಗೆ ಬಂದಿವೆ.
ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಕೆ: ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಇತರ ತಳಿಯ ಮೀನಿಗೆ ಬೇಡಿಕೆ ಹೆಚ್ಚಿದ್ದು, ಬಂಗುಡೆಗೆ ಕೆಲವು ಸಮಯದಿಂದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಮೀನು ರನ್ನು ಸಂಸ್ಥೆಗಳು ಬಂಗುಡೆ ನಿರ್ಯಾತ ಪ್ರಮಾಣವನ್ನು ಕಡಿಮೆ ಮಾಡಿವೆ. ಹಾಗಾಗಿ ಬಂಗುಡೆ ಮೀನುಗಳು ಸ್ಥಳೀಯ ಮಾರುಕಟ್ಟೆಗೇ ಬರುತ್ತಿದೆ ಎನ್ನುತ್ತಾರೆ ಮೀನುಗಾರರು.
ಬಂಗುಡೆಗಳಿಗೆ ಅವುಗಳ ಗಾತ್ರ ಮತ್ತು ಗುಣಮಟ್ಟವನ್ನು ಅನುಸರಿಸಿ ಬೆಲೆ ಇರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿದ ಮುಖ್ಯವಾಗಿ ಚೀನ ಅತೀ ದೊಡ್ಡ ಮಾರುಕಟ್ಟೆ ಯಾಗಿದೆ. ಉಳಿದಂತೆ ಬ್ಯಾಂಕಾಕ್, ರ್ಥಾಲಂಡ್, ವಿಯೆಟ್ನಾಂ ಮೊದಲಾದೆಡೆಗೆ ರಫ್ತಾಗುತ್ತದೆ ಎನ್ನುತ್ತಾರೆ ಮೀನುಗಾರರು.
ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿಗೆ 150 ರೂ. ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ; ಅಂಜಲ್ 800 ರೂ., ಮಾಂಜಿ 550 650 ರೂ. ಅಸುಪಾಸಿನಲ್ಲಿದೆ. ಮಾರುಕಟ್ಟೆಯಲ್ಲಿ ಬಂಗುಡೆ ಮೀನಿನ ದರ ಕಡಿಮೆ ಯಾದರೂ ಹೊಟೇಲ್ ದರದಲ್ಲಿ ಇಳಿಕೆಯಾಗಿ ಲ್ಲ. ಒಂದು ಬಂಗುಡೆಗೆ 150-200 ರೂ. ದರದಲ್ಲಿಯೇ ಮಾರಾಟ ನಡೆಯುತ್ತಿದೆ. ಇದರಿಂದ ಹೊಟೇಲ್ ಮೀನೂಟ ಮಾಡುವವರಿಗೆ ಬಂಗುಡೆ ದುಬಾರಿಯೇ ಆಗಿದೆ.