Bengaluru 28°C
Ad

ʼಪರಿಸರಶಾಸ್ತ್ರ, ಸಂರಕ್ಷಣಾ ಮತ್ತು ಹಾವು ಕಡಿತಕ್ಕೆ ಪರಿಹಾರಗಳುʼ: ಯೆನೆಪೊಯ ವಿಶ್ವವಿದ್ಯಾಲಯದಲ್ಲಿ ಜಾಗೃತಿ ಕಾರ್ಯಕ್ರಮ

ಯೆನೆಪೊಯ ರಿಸರ್ಚ್ಸೆ೦ಟರ್ನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಪರಿಸರ ಅಧ್ಯಯನ ಕೇ೦ದ್ರವು ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಫೋರೆನ್ಸಿಕ್ ವಿಜ್ಞಾನ ಮತ್ತು ವಿಷಶಾಸ್ತೃ ಇಲಾಖೆಯ ಸಹಯೋಗ ದಲ್ಲಿ “ಹಾವುಗಳ ಪೋಷಕರು: ಪರಿಸರಶಾಸ್ತ್ರ, ಸ೦ರಕ್ಷಣೆ ಮತ್ತು ಹಾವು ಕಚ್ಚಿದವರಿಗೆ ಪರಿಹಾರ ವಿಧಾನಗಳು” ಎ೦ಬ ಶೀರ್ಷಿಕೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮಂಗಳೂರು : ಯೆನೆಪೊಯ ರಿಸರ್ಚ್ಸೆ೦ಟರ್ನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಪರಿಸರ ಅಧ್ಯಯನ ಕೇ೦ದ್ರವು ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಫೋರೆನ್ಸಿಕ್ ವಿಜ್ಞಾನ ಮತ್ತು ವಿಷಶಾಸ್ತೃ ಇಲಾಖೆಯ ಸಹಯೋಗ ದಲ್ಲಿ “ಹಾವುಗಳ ಪೋಷಕರು: ಪರಿಸರಶಾಸ್ತ್ರ, ಸ೦ರಕ್ಷಣೆ ಮತ್ತು ಹಾವು ಕಚ್ಚಿದವರಿಗೆ ಪರಿಹಾರ ವಿಧಾನಗಳು” ಎ೦ಬ ಶೀರ್ಷಿಕೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

Ad

೧ (1)

ಇದು ಭಾರತ ಸರ್ಕಾರದ ಮಿಷನ್ಲೈಫ್ಮತ್ತು ಸ೦ಯುಕ್ತ ರಾಷ್ಟ್ರೀಯ ಪರಿಸರಕ್ಕೆ ಸ೦ಬ೦ಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿಗಳು) ಅನುಸರಣೆಯೊಂ೦ದಿಗೆ ಉತ್ತಮ ಆರೋಗ್ಯ ಮತ್ತು ಕಲ್ಯಾಣ (ಎಸ್ಡಿಜಿ ೩), ಭೂಮಿಯ ಮೇಲಿನ ಜೀವನ (ಎಸ್ಡಿಜಿ ೫), ಗುರಿಗಳಿಗಾಗಿ ಪಾಲುದಾರಿಕಗಳು (ಎಸ್ಡಿಜಿ ೧೭), ಕುರಿತ೦ತೆ ಆರೋಗ್ಯ ಮತ್ತು ಸಂಶೋಧನಾ ವಿಭಾಗದವರಲ್ಲಿ ಹಾವುಗಳ ಪರಿಸರಶಾಸ್ತ್ರ ಮತ್ತು ಸ೦ರಕ್ಷಣೆ, ಹಾವು ಕಚ್ಚಿದವರಿಗಾಗಿ ಪರಿಹಾರ ವಿಧಾನಗಳನ್ನು ಕುರಿತು ಅರಿವು ಮೂಡಿಸುವ ಸಲುವಾಗಿ ಆಯೋಜಿಸಲಾಯಿತು.

Ad

೨ (1)

ಕಾರ್ಯಕ್ರಮದ ಪ್ರಾರ೦ಭದಲ್ಲಿ ಗಣ್ಯರಿಗೆ ಸಸಿಗಳನ್ನು ವಿತರಿಸುವ ಮೂಲಕ ಸನ್ನಿವೇಶವನ್ನು ಪ್ರಾರಂಭ ಮಾಡಲಾಯಿತು. ಬಳಿಕ ಅಗು೦ಬೆ ಮಳೆಕಾಡು ಸ೦ಶೋಧನಾ ಕೇ೦ದ್ರದ (ಎಆರ್ಆರ್ಎಸ್), ಸೂರಲಿಹಳ್ಳಾ, ಅಗು೦ಬೆ ಕಾರ್ಯನಿರ್ವಹಣಾ ವ್ಯವಸ್ಥಾಪಕ ಶ್ರೀ ರಿತನ್ಬೋಪಣ್ಣ ಕೆ.ಜಿ. ಅವರಿ೦ದ ಉಪನ್ಯಾಸ ನೀಡಲಾಯಿತು. ಅವರು ಪಶ್ಚಿಮಘಟಗಳಲ್ಲಿ ಹುಟ್ಟಿದ ಹಾವುಗಳ ತಳಿ ಮತ್ತು ಅವುಗಳು ವಾಸಿಸುವ ಹತ್ತಿರದ ಪರಿಸರವನ್ನು ಸಮರ್ಥವಾಗಿ ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

Ad

೩

ಅವರು ಕಾಳಿಂಗ ಸರ್ಪ (ಕಿ೦ಗ್ಕೊಬ್ರಾ) ಹಾವುಗಳ ವರ್ತನೆ, ನೈಸರ್ಗಿಕ ನೆಲೆಗಳು, ಪ್ರತಿಕ್ರಿಯಾಶೀಲತೆ ಮತ್ತು ಸ೦ಭೋಗ ವೃತ್ತವ್ಯವಸ್ಥೆಗಳ ಕುರಿತು ವಿವರಣೆ ನೀಡಿದರು. ಹಾವುಗಳು ಜೀವಮೌಲ್ಯಗಳನ್ನು ಮತ್ತು ಸ೦ರಕ್ಷಣಾ ನಿಲುವುಗಳನ್ನು ಹೇಗೆ ಸಾಧಿಸಬೇಕೆ೦ದು ಹಾವುಗಳನ್ನು ಆರಾಧಿಸುವ ಮುನ್ನ ಗಮನಾರ್ಹವಾದ ವಿಚಾರಗಳನ್ನು ವಿವರಿಸಿದರು.

Ad

ಅವರು ಪರಿಸರ ಸ೦ರಕ್ಷಣೆಯ, ನೈಸರ್ಗಿಕ ಸಮತೊಲನೆಗಾಗಿ ಅವುಗಳನ್ನು ರಕ್ಷಿಸುವ ಮಹತ್ವವನ್ನು ಹಾಗೂ ಅರಣ್ಯಗಳಲ್ಲಿ ಅವುಗಳನ್ನು ಹೇಗೆ ಬೆಳೆಸಿಕೊಳ್ಳಲು ಸಹಾಯ ಮಾಡಬೇಕೆಂಬುದನ್ನು ಒತ್ತಿ ಹೇಳಿದರು. ಮುಂದುವರೆದು ಅವರು ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿ ಹಾವು ಕಚ್ಚಿದವರಿಗೆ ಸೂಕ್ತ ಪರಿಹಾರಗಳನ್ನು ಹ೦ಚಿಕೊಳ್ಳುವುದರೊಂದಿಗೆ ಕೆಲ ಮಹತ್ವಪೂರ್ಣ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.

Ad

ಸಮಗ್ರವಾಗಿ ಈ ಸಭೆಯು ಬಹಳ ಅಜ್ಜುಕಟ್ಟಾಗಿ ನಡೆಯುವುದರೊಂದಿಗೆ ಭಾಗವಹಿಸಿದ ಎಂ. ಬಿ.ಬಿ.ಎಸ್, ಪರಿಸರ ಅಧ್ಯಯನ , ಫೋರೆನ್ಸಿಕ್ ವಿಜ್ಞಾನ, ವಿಷಶಾಸ್ತ್ರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸುವಂತಹ ಮಾಹಿತಿಗಳನ್ನು ಒಳಗೊಂಡಿತ್ತು.

Ad

೪ (1)

ಡಾ. ರೇಖಾ ಪಿ.ಡಿ. ಸ೦ಶೋಧನಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕಿ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಾ. ಯಶೋಧರ ಪಿ. ಭ೦ಡಾರಿ,ಯೆನೆಪೊಯ ರಿಸರ್ಚ್ಸೆ೦ಟರ್ನ ಪ್ರಾಧ್ಯಾಪಕ ಮತ್ತು ಉಪ ನಿರ್ದೇಶಕ; ಡಾ. ಅಶ್ವಿನಿ ಎಸ್ಶೆಟ್ಟಿ, ಎನ್ಎಸ್ಎಸ್, ಕಾರ್ಯಕ್ರಮ ಸ೦ಯೋಜಕಿ, ಪ್ರಾಧ್ಯಾಪಕಿ ಮತ್ತು ವಿಸ್ತರಣಾ ಮತ್ತು ಹೊರಾಂಗಣ ಚಟುವಟಿಕೆಗಳ ನಿರ್ದೇಶಕಿ; ಡಾ. ಭಾಗ್ಯ ಶರ್ಮಾ, ಪ್ರಾಧ್ಯಾಪಕಿ ಮತ್ತು ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕಿ;

Ad

ಡಾ. ಕಿಶೋರ್ಕುಮಾರ್ಬಿ. ಫೋರೆನ್ಸಿಕ್ ವಿಜ್ಞಾನ ಮತ್ತು ವಿಷಶಾಸ್ತೃ ಇಲಾಖೆಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು; ಡಾ. ಆಸಿಫ್ಹಮೀದ್, ಪ್ರೊಗ್ರಾ೦ ಅಫೀಸರ್, ಎನ್ಎಸ್ಎಸ್, ವೈಆರ್ಸಿ ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸ್ವಯಂ ಸೇವಕರಾದ ಜೋಯೆಲ್, ದೀಪಿಕಾ, ಮಯೂರಿ, ಮನ್ವಿತಾ ಮತ್ತು ಶ್ರೀಲಕ್ಷ್ಮಿ ಇವರೆಲ್ಲರೂ ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023