ಮಂಗಳೂರು: ಇ & ಎನ್ ಸಿ ಪಿಎಸ್ ಠಾಣಾ ಅ,ಕ್ರ 37/2019 ಕಲಂ : 8©, 20(b) (ii) (a) NDPS ACT ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸಲೀಂ @ ಮೊಹಮ್ಮದ್ ಸಲೀಂ ಪ್ರಾಯ 38 ವರ್ಷ ತಂದೆ-ಪಿ ಇಬ್ರಾಹಿಂ ವಾಸ-ಯು ಎಮ್ ಅಬ್ದುಲ್ಲಾ ಮಂಜಿಲ್ ಟಿಸಿ ರಸ್ತೆ ರಾಯಲ್ ಕ್ಯಾಟರಿಂಗ್ ಬಳಿ ಒಳಪೇಟೆ ಉಳ್ಳಾಲ ಮಂಗಳೂರು ಎಂಬಾತನನ್ನು 2019 ರಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತದ ನಂತರ ಈತನು ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ನಿರೀಕ್ಷಕರು, ಹಾಗೂ ಉಪ- ನಿರೀಕ್ಷಕರು ಸೆನ್ ಕ್ರೈಂ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ನಿನ್ನೆ ಸೆನ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪಿಸಿ 2409 ಮಾದೇವ್ ಮಾಂಗ್ ಹಾಗೂ ಪಿಸಿ 2405 ತಿಪ್ಪಾರೆಡ್ಡಿರವರು ಆರೋಪಿತನನ್ನು ಪತ್ತೆ ಮಾಡಿ ಈ ದಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿ ಹಾಜರುಪಡಿಸಿದರು.
Ad