Bengaluru 21°C
Ad

ಕಾರ್ತಿಕ್ ಭಟ್ಟನ ಮತ್ತೊಂದು ಅವ್ಯವಹಾರ ಪ್ರಕರಣ ಬೆಳಕಿಗೆ

ಪಕ್ಷಿಕೆರೆಯಲ್ಲಿ‌ ನಡೆದ ಕೊಲೆ ಮತ್ತು‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾರ್ತಿಕ್ ಭಟ್ಟನ ಮತ್ತೊಂದು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರು: ಪಕ್ಷಿಕೆರೆಯಲ್ಲಿ‌ ನಡೆದ ಕೊಲೆ ಮತ್ತು‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾರ್ತಿಕ್ ಭಟ್ಟನ ಮತ್ತೊಂದು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ತಿಕ್ ಭಟ್ ತನ್ನ 10 ಪವನ್ ಚಿನ್ನವನ್ನು ಎಗರಿಸಿದ್ದಾನೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ ಮಹಮ್ಮದ್ ಆರೋಪಿಸಿದ್ದಾರೆ.

Ad

ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್ ವೊಂದರಲ್ಲಿ ತನ್ನ 10 ಪವನ್ ಚಿನ್ನವನ್ನು ಅಡವಿಟ್ಟು 1 ಲಕ್ಷ 60 ಸಾವಿರ ಸಾಲ ಪಡೆದಿದ್ದ ಮಹಮ್ಮದ್ ಅವರಿಗೆ ಇನ್ನೂ ಹೆಚ್ಚಿನ ಸಾಲದ ಅಗತ್ಯವಿದೆ ಎಂದು ಅರಿತ ಕಾರ್ತಿಕ್ ಭಟ್‌ ತಾನೂ ಮ್ಯಾನೇಜರ್ ಆಗಿರುವ ಸುಬ್ರಹ್ಮಣ್ಯ ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ.

Ad

ಅ

ಹೀಗಾಗಿ ಮಹಮ್ಮದ್ ಅವರು ಪಕ್ಷಿಕೆರೆ ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿ, ಕಾರ್ತಿಕ್ ಬ್ರಾಂಚ್‌ ಮ್ಯಾನೇಜರ್ ಆಗಿರುವ ಬ್ಯಾಂಕ್ ನಲ್ಲಿ ಇರಿಸಿ 3 ಲಕ್ಷ 4 ಸಾವಿರ ಸಾಲ ಪಡೆದಿದ್ದರು. ಈ ನಡುವೆ ವೈಯಕ್ತಿಕ ಸಮಸ್ಯೆಯಿಂದ ಮಹಮ್ಮದ್ ಅವರು ಊರಲ್ಲಿ ಇರದ ಕಾರಣ ಬ್ಯಾಂಕ್ ಗೆ ಸರಿಯಾಗಿ ಭೇಟಿ ನೀಡಿರಲಿಲ್ಲ.

Ad

ಕಾರ್ತಿಕ್ ಅತ್ಮಹತ್ಯೆ ಮಾಡಿದ ಕಾರಣ ಸಂಶಯಗೊಂಡ ಮಹಮ್ಮದ್ ಅವರು ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ 4 ತಿಂಗಳಲ್ಲೇ ಅಡವಿಟ್ಟ ಬಂಗಾರ ಬಿಡಿಸಿದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾರ್ತಿಕ್ ಈ ಬಂಗಾರವನ್ನು ಅಲ್ಲಿಂದ ಎಗರಿಸಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಬಂಗಾರದ ಒಡವೆ ಕಳಕೊಂಡ ಮಹಮದ್ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ad
Ad
Ad
Nk Channel Final 21 09 2023