Bengaluru 21°C

ಮಂಗಳೂರು: ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ 2025

ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ - ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು.

ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳು ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ವಿಲ್ಫೆಡ್ ಗ್ರೆಗೋರಿ ಮೊರಾಸ್, ಝಾನ್ಸಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರ್ಪಿಸುವರು.


ಅದೇ ದಿನ ಬೆಳಿಗ್ಗೆ 10.30 ಘಂಟೆಗೆ ಅತೀ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ನೆರವೇರಿಸುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪ್ರಾರ್ಥನಾವಿಧಿ. ಜನವರಿ 15ರಂದು ಬೆಳಿಗ್ಗೆ 10.30 ಘಂಟೆಗೆ ಪಶ್ಚಿಮ ಬಂಗಾಳದ ಅಸನ್‌ಸೋಲ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಎಲಿಯಾಸ್ ಫ್ರ್ಯಾಂಕ್ ಅರ್ಪಿಸಲಿರುವರು. ಇದು ವ್ಯಾದಿಷ್ಟರಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ.


ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಕಾರ್ಮೆಲ್ ಸಭೆಯ ಅತೀ ವಂದನೀಯ ರುಡೋಲ್ಫ್ ಡಿಸೋಜಾ ಅರ್ಪಿಸಲಿರುವರು. ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 6.00 (ಕೊಂಕಣಿ), 7.30 (ಇಂಗ್ಲೀಶ್), 9.00 (ಕೊಂಕಣಿ), 1.00 (ಕನ್ನಡ). ಅದೇ ದಿನ 10.30 ಘಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರುವುದು. ಈ ದಿನದ ಆರಂಭಿಕ ಪೂಜಾವಿಧಿಯನ್ನು ಬೆಳಿಗ್ಗೆ 6.00 ಘಂಟೆಗೆ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಹೆನ್ರಿ ಡಿಸೋಜಾ – ಅವರು ನೆರವೇರಿಸಲಿರುವರು.


ವಾರ್ಷಿಕ ಹಬ್ಬದ ಎರಡನೆಯ ದಿನ – ಜನವರಿ 15 ರಂದು ಬೆಳಿಗ್ಗೆ 6.30, 7.30, 9.00 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವ್ಯಾದಿಷ್ಟರಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.


ನವದಿನಗಳ ನವೇನಾ ಪ್ರಾರ್ಥನೆ
ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾವಿಧಿಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲ್ಲಿ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು.


ಪರಮ ಪ್ರಸಾದದ ಆರಾಧನೆ ಪ್ರತಿ ನವೆನಾ ದಿನಗಳಲ್ಲಿ 11.30 ರಿಂದ 12.45 ಘಂಟೆಯ ವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರಪ್ರಥಮವಾಗಿ ಪ್ರತಿದಿನ ಸಂಜೆಯ 6.00 ಘಂಟೆಯ ಬಲಿಪೂಜೆಯ ಬಳಿಕ ಹಮ್ಮಿಕೊಳ್ಳಲಾಗಿದೆ.


ಹೊರೆಕಾಣಿಕೆ: ಮಹೋತ್ಸವದ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಘಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು.


ಅನ್ನಸಂತರ್ಪಣೆ ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯುವುದು. ರಕ್ತದಾನ ಹಾಗೂ ಕೇಶದಾನ ಶಿಬಿರ: ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಹಾಗೂ ಕೇಶದಾನ ಶಿಬಿರವನ್ನು ಏರ್ಪಡಿಸಲಾಗಿದೆ.


ಎರಡು ವಿಶೇಷ ಯೋಜನೆಗಳ ಅನಾವರಣ: ಯೇಸುಕ್ರಿಸ್ತರ ಜನನದ 2025 ನೇ ಜ್ಯುಬಿಲಿ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಒಂದು ಬಡ ಕುಟುಂಬಕ್ಕೆ ಸಂಪೂರ್ಣ ಮನೆಯನ್ನು ಕಟ್ಟಿಕೊಡುವ ಯೋಜನೆ (ಇನ್‌ಫೆಂಟ್ ಜೀಸಸ್ ಜ್ಯುಬಿಲಿ ಹೌಸಿಂಗ್ ಪ್ರೋಜೆಕ್ಟ್) ಹಾಗೂ ಕಾರ್ಮೆಲ್ ಸಭೆಯ ಲಿಸಿಯಾದ ಸಂತ ತೆರೇಸಾ ಅವರನ್ನು ಸಂತಪದವಿಗೆ ಏರಿಸಿ ಶತಮಾನೋತ್ಸವವನ್ನು ಆಚರಿಚುವ ಸಂದರ್ಭದಲ್ಲಿ ಸುಮಾರು 100 ವಿಧ್ಯಾರ್ಥಿವೇತನಗಳನ್ನು (ಸೆಂಟ್ ತೆರೇಸ್ ಸೆಂಟಿನರಿ ಮೆಮೋರಿಯಲ್ ಸ್ಕೋಲರ್‌ಶಿಪ್ ಪ್ರೋಜೆಕ್ಟ್) ವಿತರಿಸಲಾಗುವುದು.


ಈ ಎರಡು ವಿಶಯಗಳನ್ನು ಆಧರಿಸಿ ಒಂದು ವಿಶೇಸ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಕಾಗೋಷ್ಠಿಯಲ್ಲಿ ವಂದನೀಯ ಫಾ. ಮೆಲ್ವಿನ್ ಡಿಕುನ್ಹಾ, ಗುರುಮಠದ ಮುಖ್ಯಸ್ಥರು, ಬಾಲಯೇಸುವಿನ ಪುಣ್ಯಕ್ಷೇತ್ರ, ವಂದನೀಯ ಫಾ. ಸ್ವೀವನ್ ಪಿರೇರಾ, ನಿರ್ದೇಶಕರು, ಬಾಲಯೇಸುವಿನ ಪುಣ್ಯಕ್ಷೇತ್ರ , ವಂದನೀಯ ಫಾ. ದೀಪ್ ಫೆರ್ನಾಂಡೀಸ್, ಕಾರ್ಮೆಲ್ ಸಭೆಯಲ್ಲಿ ಹಾಜರಿದ್ದರು.


Nk Channel Final 21 09 2023