ಬಂಟ್ವಾಳ : ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ (ರಿ.) ಬಂಟ್ವಾಳ ಘಟಕದ ಸಾರಥ್ಯದಲ್ಲಿ ಜಿಲ್ಲಾ ವಾರ್ಷಿಕ ಮಿಲನೋತ್ಸವ – 2024 ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಕೂಟ ಬಿಸಿರೋಡಿನ ಸ್ಲರ್ಶಾ ಕಲಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅವರು, ಶಾಮಿಯಾನ ಮಾಲಕರ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಹಾಗೂ ಶಾಮಿಯಾನ ಮಾಲಕ ಹಾಗೂ ಕಾರ್ಮಿಕ ವರ್ಗದವರಿಗೆ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಹುಟ್ಟು ಹಾಕಿದ ಸಂಘ ಇದೀಗ ಜಿಲ್ಲಾ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿದೆ. ಪ್ರತಿಯೊಂದು ಉದ್ಯಮವು ಸಮಾಜದಲ್ಲಿ ಸಂಘಟನಾತ್ಮಕ ಅಭಿವೃದ್ಧಿ ಹೊಂದಿದಾಗ ಸಾಮಾಜಿಕವಾಗಿ ಗುರುತಿಸಲ್ಪಡುತ್ತದೆ ಎಂದು ಅವರು ತಿಳಿಸಿದರು.
ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಸಂಘದ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಸಂಘನೆಯ ಬಲವರ್ಧನೆಗಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘಟಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಒತ್ತಡದ ಜೀವನದ ಮಧ್ಯೆ ಇಂತಹ ಕ್ರೀಡಾಕೂಟ ಮಿಲನೋತ್ಸವ ಕಾರ್ಯಕ್ರಮ ಅರಿತು ಬದುಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಧನರಾಜ್ ಶೆಟ್ಟಿ ಮಾತನಾಡಿ ಒಕ್ಕೂಟ ರಚನೆಯಾದರೆ ಇನ್ನಷ್ಟು ಉತ್ತಮ ಕಾರ್ಯಕ್ರಮಗಳ ಮೂಲಕ ಸಂಘಟಿತರಾಗಲು ಸಾಧ್ಯವಾಗಬಹುದು ಎಂದು ತಿಳಿಸಿದರು.ಕ್ಯಾಟರಿಂಗ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಶೀದ್, ಡೆಕೋರೇಶನ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ತುಷಾರ್ ಸುರೇಶ್, ಜಿಲ್ಲಾ ಕೋಶಾಧಿಕಾರಿ ಬಾಲಕೃಷ್ಣ ಕದ್ರಿ, ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕೋಶಾಧಿಕಾರಿ ಮೈಕಲ್ ಡಿಕೋಸ್ತಾ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ, ಸಹಸಂಚಾಲಕ ಐವನ್ ಡಿ.ಸೋಜ, ಚಂದ್ರಶೇಖರ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರಿಗಳಾದ ಕ್ಲೇವರ್ ಡಿ.ಸೋಜ, ಶಿವಪ್ರಸಾದ್ ಹೆಗ್ಡೆ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಸುದೀರ್ ನಿರ್ಮಲ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ….
ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ (ರಿ.) ಬಂಟ್ವಾಳ ಘಟಕದ ಸಾರಥ್ಯದಲ್ಲಿ ಜಿಲ್ಲಾ ವಾರ್ಷಿಕ ಮಿಲನೋತ್ಸವ – 2024 ಕಾರ್ಯಕ್ರಮದ ಅಂಗವಾಗಿ ನಡೆದ ಕ್ರೀಡಾ ಕೂಟದ ಸಮಾರೋಪ ಸಮಾರಂಭ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಶಾಮಿಯಾನ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ.ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಸಮಾಪನಗೊಂಡಿತು.
ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು.
ಮೂರು ವರ್ಷ ಯಶಸ್ವಿ ಅಧ್ಯಕ್ಷನಾಗಿ ಸಂಘವನ್ನು ಮುನ್ನಡೆಸಿದ ಶಾಮಿಯಾನ ಮಾಲಕರ ಸಂಘದ ಮಾಜಿ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಬಂಟ್ವಾಳ ತಾಲೂಕಿನ ಶಾಮಿಯಾನ ಮಾಲಕರ ಜೊತೆ ಕಳೆದ 20 ವರ್ಷಗಳಿಂದ ಕೆಲಸ ನಿರ್ವಹಿಸಿದ ಐದು ಮಂದಿ ನೌಕರರಾದ ಶಶಿಧರ್ ಪೂಜಾರಿ, ಶ್ರೀಧರ್ ಸಪಲ್ಯ, ವಿಶ್ವನಾಥ ನಾಯ್ಕ, ಬಾಬು ನಾಯಕ್, ವೆಂಕಪ್ಪಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಕೇಶವ ಅಮೈ , ರಾಜೇಶ್ ಎಂ. ಅಬ್ದುಲ್ ಲತೀಪ್, ಅಬ್ದುಲ್ ರಶೀದ್, ಫಾರೂಕ್ ಮಹಮ್ಮದ್, ದೀಪಾ ಕಾಮತ್, ಮೂಡಬಿದಿರೆಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಮಂಗಳೂರು ಘಟಕದ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕೋಶಾಧಿಕಾರಿ ಮೈಕಲ್ ಡಿಕೋಸ್ತಾ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ, ಸಹಸಂಚಾಲಕ ಐವನ್ ಡಿ.ಸೋಜ, ಚಂದ್ರಶೇಖರ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರಿಗಳಾದ ಕ್ಲೇವರ್ ಡಿ.ಸೋಜ, ಶಿವಪ್ರಸಾದ್ ಹೆಗ್ಡೆ, ಅಬ್ದುಲ್ ಲತೀಫ್, ಜಿಲ್ಲಾ ಉಪಾಧ್ಯಕ್ಷ ಶುಭಾಶ್ಚಂದ್ರ ಜೈನ್ ಕಾರ್ಯದರ್ಶಿ ಸುದೀರ್ ನಿರ್ಮಲ್ ಉಪಸ್ಥಿತರಿದ್ದರು.
ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ ವಂದಿಸಿದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Ad