Bengaluru 22°C
Ad

ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿಯ ಜೋಪಡಿ ಧ್ವಂಸ!

ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿಯ ಜೋಪಡಿ ಧ್ವಂಸಗೊಳಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ನಡೆದಿದೆ.

ಕಡಬ: ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿಯ ಜೋಪಡಿ ಧ್ವಂಸಗೊಳಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ನಡೆದಿದೆ. ಕಳೆದ ಹಲವು ತಿಂಗಳಿಂದ ಪ್ರಕರಣ ವಿವಾದ ಸೃಷ್ಟಿಸಿದ್ದು, ಸರಕಾರಿ ಜಾಗದಲ್ಲಿದ್ದ ವೃದ್ಧ ದಂಪತಿಗೆ ಮನೆ ತೆರವು ಗೊಳಿಸಲು ನೋಟಿಸ್ ನೀಡಲಾಗಿತ್ತು.

Ad

6 ವರ್ಷಗಳಿಂದ ರಾಧಮ್ಮ ಮುತ್ತುಸ್ವಾಮಿ ದಂಪತಿ ಸರಕಾರಿ ಜಾಗದಲ್ಲಿ ವಾಸವಿದ್ದರು. ಸರಕಾರಿ ಜಾಗಕ್ಕೆ ಐವತ್ತು ಸಾವಿರ ರೂಪಾಯಿ ನೀಡಿ ಖರೀದಿಸಿದ್ದರು. ಸರಕಾರಿ ಜಾಗದ ಅತಿಕ್ರಮಣ ತೆರವುಗೊಳಿಸಲು ಬೆಳ್ತಂಗಡಿಯ ಅಶೋಕ್ ಆಚಾರ್ಯ ಎಂಬಾತನಿಂದ ದಾವೆ .

Ad

ಈ ಹಿನ್ನಲೆ ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ತೀವ್ರ ಆಕ್ರೋಶದ ಬೆನ್ನಲ್ಲೇ ಪ್ರಕರಣ ತಣ್ಣಗಾಗಿತ್ತು. ಇದೀಗ ಏಕಾಏಕಿ ಅಧಿಕಾರಿಗಳಿಂದ ಮನೆ ಧ್ವಂಸಗೊಳಿಸಿದ್ದಾರೆ. ಮನೆಯ ವಸ್ತುಗಳನ್ನ ಹೊರಗೆಸೆದು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಧಿಕಾರಿಗಳ ಮುಂದೆ ವೃದ್ಧ ದಂಪತಿ ಕಣ್ಣೀರು ಹಾಕಿದ್ದು, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್ ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ತೆರವುವೊಳಿಸಲಾಗಿದೆ.

Ad

ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಿನ್ನೆಲೆಯಲ್ಲಿ ಕೋರ್ಟ್ ಗೆ ಅನುಪಾಲನಾ ವರದಿಯನ್ನು ತಹಶಿಲ್ದಾರ್ ಸಲ್ಲಿಸಿದ್ದು, ಸರ್ಕಾರಿ ಜಾಗದಲ್ಲಿ ಮನೆ ತೆರವುಗೊಳಿಸಿ ಹೈಕೋರ್ಟ್ಗೆ ಅನುಪಾಲನಾ ವರದಿ ಸಲ್ಲಿಕೆಯಾಗಿದೆ.

Ad
Ad
Ad
Nk Channel Final 21 09 2023