Bengaluru 29°C
Ad

ಆಳ್ವಾಸ್ ನಲ್ಲಿ ಜೂನ್ 7 ಹಾಗೂ 8 ರಂದು ಬೃಹತ್ ಉದ್ಯೋಗ ಮೇಳ

2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಮಹತ್ಕಾರ್ಯವನ್ನು ಸಾಂಗವಾಗಿ ನಡೆಸುತ್ತಿದೆ.

ಮಂಗಳೂರು:  2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಮಹತ್ಕಾರ್ಯವನ್ನು ಸಾಂಗವಾಗಿ ನಡೆಸುತ್ತಿದೆ. ಎರಡು ದಶಕಗಳಿಂದ ಪ್ರಗತಿ ಮೇಳವು ತನ್ನ ನಿಖರವಾದ ಯೋಜನೆ, ಉತ್ತಮ ಆತಿಥ್ಯ ಮತ್ತು ಉನ್ನತ ಮಟ್ಟದ ವೃತ್ತಿ ಅವಕಾಶಗಳೊಂದಿಗೆ ಪ್ರತಿಷ್ಠಿತ ಉದ್ಯೋಗ ಮೇಳವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಳೆದ 13 ಆಳ್ವಾಸ್ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31, 896 ಉದ್ಯೋಗಾವಕಾಶವನ್ನು ನೀಡಿದ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‍ಆರ್ ಚಟುವಟಿಕೆಯ ಅಡಿಯಲ್ಲಿ ಉದ್ಯೋಗ ಮೇಳದ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. ಈ ಮೇಳವು, ಭಾಗವಹಿಸುವವರಿಗೆ ಮತ್ತು ನೇಮಕಾತಿ ನಡೆಸುವ ಕಂಪನಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ.

ಈ ವರ್ಷ, ನೇಮಕಾತಿ ಕಂಪನಿಗಳ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಲ್ಪಟ್ಟಿವೆ ಮತ್ತು ಉದ್ಯೋಗ ಮೇಳದ ಸಂಘಟನಾ ಸಮಿತಿಯು 254 ಪ್ರಮುಖ ನೇಮಕಾತಿದಾರರ ಭಾಗವಹಿಸುವಿಕೆಯನ್ನು ಅಂತಿಮಗೊಳಿಸಿದೆ.

ಕರಾವಳಿ ಐಟಿ ವಲಯವಾಗಿ ದಾಪುಗಾಲು
ಮಂಗಳೂರು ಮತ್ತು ಉಡುಪಿಯು ಕರ್ನಾಟಕದ ಭವಿಷ್ಯದ ತಂತ್ರಜ್ಞಾನದ ಕೇಂದ್ರವಾಗಲು ಸಜ್ಜಾಗುತ್ತಿವೆ. ಈ ಜಿಲ್ಲೆಗಳು ಕರಾವಳಿ ಸೌಂದರ್ಯ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಒಳಗೊಂಡಿವೆ. ಈ ಪ್ರಯತ್ನಕ್ಕೆ ಸಾಕಷ್ಟು ಬೆಂಬಲ ನೀಡುತ್ತಿರುವ ಆಳ್ವಾಸ್ ಪ್ರಗತಿ, ಈ ಉದ್ಯಮಗಳಿಗೆ ಪ್ರತಿಭಾವಂತ ಯುವಸಮುದಯದ ಬೃಹತ್ ಸಮೂಹವನ್ನು ಪೂರೈಸುವಲ್ಲಿ ಗಣನೀಯ ಪಾತ್ರವಹಿಸುತ್ತಿದೆ. ಈ ಪ್ರಯತ್ನವನ್ನು ಗುರುತಿಸಿ, ಪ್ರತಿμÁ್ಠನವು ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯಲ್ಲಿ ಉದ್ಯಮ ಸ್ಥಾಪಿಸಿರುವ ಆರು ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರನ್ನು ಗೌರವಿಸಲಿದೆ.

ಉದ್ಘಾಟನಾ ಸಮಾರಂಭ
ಆಳ್ವಾಸ್ ಪ್ರಗತಿ 2024 ರ 14 ನೇ ಆವೃತ್ತಿಯ ಉದ್ಘಾಟನೆಯು ಜೂನ್ 7 ರಂದು ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯಲಿದ್ದು, ಎಂಆರ್‍ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರುವರು.

ಗ್ಲೋಟೆಕ್ ಟೆಕ್ನಾಲಜೀಸ್, ಅಧ್ಯಕ್ಷರು, ವಿದ್ಯಾ ರವಿಚಂದ್ರನ್, ನೀವಿಯಸ್ ಸೊಲ್ಯೂಷನ್ಸ್ ಸಿಇಒ ಸುಯೋಗ್ ಶೆಟ್ಟಿ, ಇಜಿ ಇಂಡಿಯಾ ಪ್ರೈ. ಲಿಮಿಟೆಡ್ ಸಿಇಒ ಮತ್ತು ನಿರ್ದೇಶಕ, ಆನಂದ್ ಫೆನಾರ್ಂಡಿಸ್, ಬಿಪಿಎಂ ಆಪರೇಷನ್ಸ್ ಇನ್ಫೋಸಿಸ್, ಮಂಗಳೂರು, ಮುಖ್ಯಸ್ಥ, ಲಲಿತ್ ರೈ, 99ಗೇಮ್ಸ್/ರೋಬೋಸಾಫ್ಟ್ ಸಂಸ್ಥಾಪಕ, ಟಿಐಇ ಮಂಗಳೂರಿನ ಸ್ಥಾಪಕ ಅಧ್ಯಕ್ಷ, ರೋಹಿತ್ ಭಟ್, ಜುಗೊ ಸ್ಟುಡಿಯೋಸ್ ಪ್ರೈ. ಲಿಮಿಟೆಡ್, ಡೆಲಿವರಿ- ಉಪಾಧ್ಯಕ್ಷ, ಅಭಿಜಿತ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಆಳ್ವಾಸ್ ಪ್ರಗತಿ 2024
ಎರಡು ದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿಯ 14 ನೇ ಆವೃತ್ತಿಯಲ್ಲಿ ಐಟಿ, ಐಟಿಇಎಸ್, ಉತ್ಪಾದನೆ, ಬಿಎಫ್‍ಎಸ್‍ಐ, ಮಾರಾಟ ಮತ್ತು ಚಿಲ್ಲರೆ, ಹಾಸ್ಪಿಟಾಲಿಟಿ, ಟೆಲಿಕಾಂ, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ ಮತ್ತು ಎನ್‍ಜಿಒಗಳಂತಹ ಪ್ರಮುಖ ವಲಯಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿದಾರರು ಭಾಗವಹಿಸಲಿದ್ದಾರೆ.
ವೈದ್ಯಕೀಯ ಮತ್ತು ಪ್ಯಾರಾ-ಮೆಡಿಕಲ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನಸಿರ್ಂಗ್ ಜೊತೆಗೆ ಐಟಿಐ, ಡಿಪೆÇ್ಲಮಾ, ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಮತ್ತು ಇತರ ಅರ್ಹ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಈ ವಲಯಗಳು ಹೆಚ್ಚಿನ ಸಂಖ್ಯೆಯ ಅವಕಾಶಗಳನ್ನು ನೀಡಲಿದೆ. ಇದಲ್ಲದೆ, ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಹಾಗೆಯೇ ಅನುಭವಿ ಅಭ್ಯರ್ಥಿಗಳನ್ನು ಈ ಅವಕಾಶವನ್ನು ಬಳಸಿಕೊಳ್ಳಲು ಆಹ್ವಾನಿಸಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಒಟ್ಟು 20,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಹೊಂದಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ಭರವಸೆ ಇದೆ.

ಆಳ್ವಾಸ್ ಪ್ರಗತಿ – 2024ರ ವಿಶೇಷತೆಗಳು:
• ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ ಈಗಾಗಲೇ 254 ಕಂಪೆನಿಗಳು ನೋಂದಾಯಿಸಿಕೊಂಡಿವೆ
• 20043+ ಉದ್ಯೋಗ ಅವಕಾಶಗಳು ಇರಲಿವೆ

ಐಟಿ ವಲಯ:
 ಇನ್ಫೋರ್ಮೇಟಿಕ, ಅಮೇಜಾನ್, ಇಜಿಡಿಕೆ, ಟಿಸಿಎಸ್, ಫ್ಲಿಪ್ಕಾರ್ಟ್, ವಿನ್ ಮ್ಯಾನ್ ಸಾಫ್ಟ್ವೇರ್ ಹಾಗೂ ಇನ್ನಿತರ ಕಂಪೆನಿಗಳು ಭಾಗವಹಿಸಲಿವೆ
 ಒಟ್ಟು 207 ಸಾಫ್ವೇರ್ ಇಂಜಿನಿಯರಿಂಗ್ ಹುದ್ದೆಗಳು ಸೇರಿದಂತೆ 20 ಕಂಪೆನಿಗಳಲ್ಲಿ 843 ಉದ್ಯೋಗ ಅವಕಾಶಗಳು
 400ಕ್ಕೂ ಅಧಿಕ ಉದ್ಯೋಗಾವಕಾಶಗಳು ಯಾವುದೇ ಹಿನ್ನಲೆಯ ಪದವೀಧರರಿಗೆ ಅಮೇಜಾನ್ ಹಾಗೂ ಟಿಸಿಎಸ್ ಕಂಪೆನಿಗಳ ಜೊತೆ ಇನ್ನಿತರ ಕಂಪೆನಿಗಳಲ್ಲಿ ಅವಕಾಶವಿದೆ.
 ಫ್ಲಿಪ್ಕಾರ್ಟ್ ಕಂಪೆನಿಯು ಎಂಬಿಎ ಹಾಗೂ ಬಿಇ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳಲಿದೆ.

ಉತ್ಪಾದನಾ ವಲಯ:
 7000ಕ್ಕೂ ಅಧಿಕ ಉದ್ಯೋಗಾವಕಾಶ ಹೊಂದಿರುವ 52 ಕಂಪೆನಿಗಳು ಈ ವಲಯದಲ್ಲಿ ಇರಲಿವೆ.
 ಏಸ್ ಡಿಸೈನರ್ಸ್ ಲಿ., ಬೋಶ್ ಆಟೊಮೆಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್, ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಅಜಕ್ಸ್ ಎಂಜಿನೀಯರಿಂಗ್ ಪ್ರೈ. ಲಿ., ಬುಹ್ಲರ್ ಇಂಡಿಯಾ ಪ್ರೈ. ಲಿ., ವೋಲ್ವೋ ಗ್ರೂಪ್ ಆಫ್ ಇಂಡಿಯಾ ಪ್ರೈ. ಲಿ. ಮುಂತಾದ ಕಂಪೆನಿಗಳು ನೋಂದಾಯಿಸಿಕೊಂಡಿವೆ.
 ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಅಭ್ಯರ್ಥಿಗಳಿಗೆ 2500+ ಹುದ್ದೆಗಳು, ಐಟಿಐ ಅಭ್ಯರ್ಥಿಗಳಿಗೆ 1300+ ಹುದ್ದೆಗಳು, ಡಿಪೆÇ್ಲಮಾ ಅಭ್ಯರ್ಥಿಗಳಿಗೆ 1600+ ಹುದ್ದೆಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಿಗೆ 240 ಹುದ್ದೆಗಳು, ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಅಭ್ಯರ್ಥಿಗಳಿಗೆ 55ಕ್ಕೂ ಅಧಿಕ ಉದ್ಯೋಗಾವಕಾಶ ಇರಲಿವೆ.
 ಕಂಪೆನಿಗಳಾದ ವೋಲ್ವೋ ಟ್ರಕ್ಸ್, ಎಸ್‍ಕೆಎಫ್ ಲೂಬ್ರಿಕೇಶನ್ಸ್ ಮುಂತಾದ ಕಂಪೆನಿಗಳು ಐಟಿಐ, ಡಿಪೆÇ್ಲಮಾ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ.

ಬಿಎಫ್‍ಎಸ್‍ಐ(ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್) ವಲಯ:
 28 ಕಂಪೆನಿಗಳಿಂದ 2300 ಹುದ್ದೆಗಳಿಗೆ ಅವಕಾಶಗಳು ಬ್ಯಾಂಕಿಂಗ್ ಹಾಗೂ ಫೈನಾನ್ಸ್ ಕ್ಷೇತ್ರದಲ್ಲಿ ಇರಲಿವೆ.
 ಫ್ಯಾಕ್ಟ್ ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿ. ಇಎಕ್ಸೆಲ್, ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹಿಂದ್ರಾ ಬ್ಯಾಂಕ್, ಕೆನರಾ ಎಚ್‍ಎಸ್‍ಬಿಸಿ, ಮಹಿಂದ್ರಾ ಫೈನಾನ್ಸ್, ಭಾರತ್ ಫೈನಾನ್ಸ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ
 ಫ್ಯಾಕ್ಟ್ ಸೆಟ್ ಸಿಸ್ಟಮ್ಸ್ ಹಾಗೂ ಇಎಕ್ಸ್‍ಎಲ್ ಕಂಪೆನಿಗಳು ವಾರ್ಷಿಕ 7 ಲಕ್ಷ ಪ್ಯಾಕೇಜ್ ನೀಡಲಿವೆ.
 ಎಂಬಿಎ, ಎಂಕಾಮ್ ಪದವೀಧರರಿಗೆ 400ಕ್ಕೂ ಅಧಿಕ ಹುದ್ದೆಗಳು, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ಪದವೀಧರರಿಗೆ 1400 ಉದ್ಯೋಗ ಅವಕಾಶ ಇರಲಿವೆ.
 400+ ಉದ್ಯೋಗಗಳು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಅಭ್ಯರ್ಥಿಗಳಿಗೆ ಲಭ್ಯ ಇರಲಿವೆ.

ಐಟಿಇಎಸ್ ವಲಯ:
 ಐಟಿಇಇಸ್ ವಲಯದಲ್ಲಿ 4000+ ಉದ್ಯೋಗಗಳು.
 ಪ್ರಮುಖ ಕಂಪೆನಿಗಳಾದ ಟೆಕ್ ಮಹಿಂದ್ರಾ ಬಿಪಿಒ ಲಿಮಿಟೆಡ್, ಜೆನ್ಪಕ್ಟ್, ಫಸ್ರ್ಟ್ ಸೋರ್ಸ್, 24*7ಎಐ, ಕಾನ್ಸೆನ್‍ಟ್ರಿಕ್ಸ್, ಜೆನಿಸಿಸ್, ಗ್ಲೋಟಚ್ ಟೆಕ್ನೋಲಜಿಸ್, ಸೆಜಿಲಿಟಿ ಹೆಲ್ತ್, ಟ್ರಾನ್ಸ್‍ಕಾಸ್ಮೋಸ್ ಇಂಡಿಯಾ ಪ್ರೈ. ಲಿ. ಮುಂತಾದವುಗಳು ಭಾಗವಹಿಸಲಿವೆ.
 ಎಚ್‍ಆರ್ ಹುದ್ದೆಗೆ ಬಿಎಸ್ಡಬ್ಲ್ಯೂ, ಬಿಎಚ್‍ಆರ್‍ಡಿ, ಎಂಎಸ್‍ಡಬ್ಲ್ಯೂ ಹಾಗೂ ಎಮ್‍ಎಚ್‍ಆರ್‍ಡಿ ಅಭ್ಯರ್ಥಿಗಳಿಗೆ ಅವಕಾಶ ಇರಲಿವೆ.
 ಐಟಿ ಕ್ಷೇತ್ರದಲ್ಲಿ 50ಕ್ಕೂ ಅಧಿಕ ಕೋರ್ ಐಟಿ ಉದ್ಯೋಗಗಳು ಪೈತಾನ್ ಡೆವಲಪರ್, ಸಾಫ್ಟ್ವೇರ್ ಡೆವಲಪರ್ ಹುದ್ದೆಗಳು ಬಿಇ, ಬಿಟೆಕ್ ಅಭ್ಯರ್ಥಿಗಳಿಗೆ ಲಭಿಸಲಿವೆ.
 1000ಕ್ಕೂ ಅಧಿಕ ಹುದ್ದೆಗಳ ಅವಕಾಶಗಳು ಪಿಯುಸಿ ಅಭ್ಯರ್ಥಿಗಳಿಗೆ ಇರಲಿವೆ

ಫಾರ್ಮಾ ವಲಯ:
 7 ಫಾರ್ಮಾ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸಲಿವೆ.
 ಅಂತಮ್ ಬಯೋ, ಹಿಟಿರೋ ಲ್ಯಾಬ್ಸ್, ಹಿಮಾಲಯ, ಎಂಎಸ್‍ಎನ್ ಲ್ಯಾಬ್ಸ್, ರೆಸಿ ಫಾರ್ಮಾ ಹಾಗೂ ಅಲೆಂಬಿಕ್ ಫಾರ್ಮಸ್ಯುಟಿಕಲ್ಸ್ ಕಂಪೆನಿಗಳು ಈಗಾಗಲೇ ನೋಂದಾಯಿಸಿಕೊಂಡಿವೆ.
 ಈ ವಲಯದಲ್ಲಿ 700 ಕ್ಕೂ ಅಧಿಕ ಉದ್ಯೋಗಾವಕಾಶಗಳಿದ್ದು, 250 ಹುದ್ದೆಗಳು ಬಿಎಸ್ಸಿ, 150+ ಬಿ.ಫಾರ್ಮಾ ಹಾಗೂ ಎಂ.ಫಾರ್ಮಾ, 200+ ಹುದ್ದೆಗಳು ಎಂಎಸ್ಸಿ ಕೆಮಿಸ್ಟ್ರಿ ಹಾಗೂ 100+ ಹುದ್ದೆಗಳು ಐಟಿಐ ಹಾಗೂ ಡಿಪೆÇ್ಲಮಾ ಅಭ್ಯರ್ಥಿಗಳಿಗೆ ಇರಲಿವೆ.

ಆರೋಗ್ಯ ವಲಯ:
 ಹಿರನಂದಾನಿ ಆಸ್ಪತ್ರೆ ಮುಂಬೈ, ಸಕ್ರ ವಲ್ರ್ಡ್, ಕಾವೇರಿ ಆಸ್ಪತ್ರೆ, ನಾರಾಯಣ ಹೆಲ್ತ್, ಅಪೆÇಲೊ ಹೋಮ್‍ಕೇರ್ ಮುಂತಾದ ಪ್ರತಿಷ್ಠಿತ ಆಸ್ಪತ್ರೆಗಳು ಭಾಗವಹಿಸಲಿವೆ.
 24 ಆರೋಗ್ಯಕ್ಕೆ ಸಂಬಂದಿಸಿದ ಸಂಸ್ಥೆಗಳಿಂದ 1000+ ಉದ್ಯೋಗದ ಅವಕಾಶ.
 600+ ನಸಿರ್ಂಗ್ ಹುದ್ದೆಗಳು, ಬಿಎಚ್‍ಎ, ಎಂಎಚ್‍ಎ, ಎಂಬಿಎ, ಬಿಕಾಂ ಮತ್ತು ಎಂಕಾಮ್ ಪದವಿ ಹೊಂದಿರುವವರಿಗೆ 200+ ಉದ್ಯೋಗಗಳು ನಿರ್ವಹಣೆ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಗುಣಮಟ್ಟ ನಿರ್ಧಾರ, ಆಡಳಿತ ವಿಭಾಗದಲ್ಲಿ ಲಭ್ಯವಿದೆ.
 ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಎಟಿ-ಒಟಿ ತಂತ್ರಜ್ಞರು ಮತ್ತು ಔಷಧಿಕಾರರು ಸೇರಿದಂತೆ ವೈದ್ಯಕೀಯ ವೃತ್ತಿಪರರಿಗೆ 200+ ಉದ್ಯೋಗಾವಕಾಶ.

ಮಾರಾಟ ವಲಯ:
 47 ಕಂಪನಿಗಳು ಈ ವಲಯದಲ್ಲಿ 3300+ ಉದ್ಯೋಗಗಳನ್ನು ನೀಡಲಿವೆ
 ಕೋಡ್‍ಯಂಗ್, ಕಲ್ಟ್‍ಫಿಟ್, ಲುಲು ಗ್ರೂಪ್, ಬ್ಲೂಸ್ಟೋನ್ ಜ್ಯುವೆಲ್ಲರಿ, ರಿಲಯನ್ಸ್ ಗ್ರೂಪ್ ಹಾಗೂ ಇನ್ನೂ ಅನೇಕ ಕಂಪೆನಿಗಳು ಭಾಗವಹಿಸಲಿವೆ
 ನಂದಿ ಟೊಯೋಟಾ, ಮಾಂಡೋವಿ ಮೋಟಾರ್ಸ್, ಸುಪ್ರೀಂ ಆಟೋ, ಆರ್‍ಎನ್‍ಎಸ್ ಮೋಟಾರ್ಸ್‍ನಂತಹ ಆಟೋಮೊಬೈಲ್ ಶೋರೂಮ್‍ಗಳು ಕೂಡ ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಂಡಿವೆ.
 ಈ ವಲಯವು 1300+ ಡಿಪೆÇ್ಲಮಾ ಮತ್ತು ಐಟಿಐ, 1200+ ಪದವಿ, 400+ ಪಿಯುಸಿ ಮತ್ತು 200+ ಸ್ನಾತಕೋತ್ತರ ಪದವೀಧರರಿಗೆ ಅವಕಾಶಗಳನ್ನು ಹೊಂದಿದೆ.

ಮಾಧ್ಯಮ ವಲಯ:
 ಟೈಮ್ಸ್ ಗ್ರೂಪ್, ಸಂಯುಕ್ತ ಕರ್ನಾಟಕ, ವಾರ್ತಾ ಭಾರತಿ, ಹೊಸದಿಗಂತ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿವೆ.
 ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ 75 ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಮತ್ತು 4.8 ಲಕ್ಷ ವರೆಗಿನ ವಾರ್ಷಿಕ ಸಂಭಾವನೆ ಇರಲಿದೆ.
 ಸಂಪಾದಕ, ಆಡಳಿತ, ಜಾಹೀರಾತು, ಮಾರ್ಕೆಟಿಂಗ್, ಉತ್ಪಾದನೆ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ಇರಲಿದೆ.
 ಯುವ ಪೀಳಿಗೆಗೆ ವಿಡಿಯೋ ಸಂಪಾದಕ, ಆ್ಯಂಕರ್, ಕಂಟೆಂಟ್ ಕ್ರಿಯೇಟರ್, ವಾಯ್ಸ್ ಓವರ್, ಪೇಜ್ ಡಿಸೈನರ್, ಗ್ರಾಫಿಕ್ ಡಿಸೈನರ್ ಮುಂತಾದ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಲ್ಲಿ ಸಾಕಷ್ಟು ಅವಕಾಶಗಳು ಇವೆ.

ನಿರ್ಮಾಣ ವಲಯ:
 9 ಕಂಪನಿಗಳು ಈ ವಲಯದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ
 ಎಕ್ಸರ್ಪಟೈಸ್, ಅಲ್ಟ್ರಾಟೆಕ್ ಸಿಮೆಂಟ್ಸ್, ಪೆಟ್ರೋಕಾನ್ ಇಂಜಿನಿಯರ್ಸ್ ಮತ್ತು ಕನ್ಸಲ್ಟೆಂಟ್ಸ್, ನಿಕೇತನ್ ಕನ್ಸಲ್ಟೆಂಟ್ಸ್, ಸ್ಟ್ರೇಕಾನ್, ಅಮರ್ ಇನ್ಫ್ರಾ ಇತ್ಯಾದಿ ಕಂಪೆನಿಗಳು ಭಾಗವಹಿಸಲಿವೆ.
 ಈ ವಲಯದಲ್ಲಿ 300+ ಉದ್ಯೋಗಗಳು ಲಭ್ಯವಿದೆ
 ಈ ವಲಯದಲ್ಲಿ 50+ ಸಿವಿಲ್ ಇಂಜಿನಿಯರಿಂಗ್ ಉದ್ಯೋಗಗಳಿವೆ.
 ಮೆಕ್ಯಾನಿಕಲ್ ಇಂಜಿನಿಯರ್‍ಗಳು, ಎಲೆಕ್ಟ್ರಿಕಲ್ ಇಂಜಿನಿಯರ್‍ಗಳು, ಡಿಪೆÇ್ಲಮಾ, ಐಟಿಐ ವಿದ್ಯಾರ್ಹತೆಗಳು ಹೀಗೆ 250+ ಉದ್ಯೋಗಗಳು.

ಹಾಸ್ಪಿಟಾಲಿಟಿ ವಲಯ:
 ಈ ವಲಯದಲ್ಲಿ 12 ಕಂಪನಿಗಳು ನೋಂದಾಯಿಸಿಕೊಂಡಿವೆ.
 ದುಬೈ ಮೂಲದ ಫಿಲ್ಲಿ ಕೆಫೆ ಗ್ರೂಪ್ ಆಫ್ ರೆಸ್ಟೋರೆಂಟ್‍ಗಳು, ತಾಜ್‍ಸ್ಯಾಟ್ಸ್ ಏರ್ ಕ್ಯಾಟರಿಂಗ್ ಬೆಂಗಳೂರು, ದಿ ತಮಾರಾ ಕೂರ್ಗ್, ಎಮರಾಲ್ಡ್ ಕ್ಲಾರ್ಕ್ ಇನ್ ಸೂಟ್ಸ್ ಮೈಸೂರು, ವಂಡರ್ಲಾ ರೆಸಾರ್ಟ್ ಬೆಂಗಳೂರು, ಅವತಾರ್ ಗ್ರೂಪ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ
 ವಿಭಿನ್ನ ಅಭ್ಯರ್ಥಿಗಳಿಗೆ 295 ಹುದ್ದೆಗಳು, ಯಾವುದೇ ಪದವೀಧರರಿಗೆ 45 ಉದ್ಯೋಗಾವಕಾಶಗಳು, ಬಿಎಚ್‍ಎಂ/ಬಿಎಚ್‍ಎಸ್ ಪದವೀಧರರಿಗೆ 162 ಉದ್ಯೋಗಗಳು, 40+ ಐಟಿಐ ಉದ್ಯೋಗಗಳು, 20+ ಎಸ್ಸೆಸೆಲ್ಸಿ ಮತ್ತು ಪಿಯುಸಿ ಉದ್ಯೋಗಗಳ ಅವಕಾಶ.

ವಿಶೇಷ ಸೂಚನೆ:
• ಆಳ್ವಾಸ್ ಪ್ರಗತಿ 2024ರ ಸವಿವರ ಮಾಹಿತಿಗಾಗಿ ವೆಬ್‍ಸೈಟ್ www.alvaspragati.com ಗೆ ಭೇಟಿ ನೀಡಿ.
• ಆಳ್ವಾಸ್ ಪ್ರಗತಿಯ ಎರಡು ದಿನಗಳೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
• ದೂರದ ಆಕಾಂಕ್ಷಿಗಳಿಗೆ ಜೂನ್ 6ರಿಂದ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

9008907716 / 9663190590 / 7975223865 / 9741440490
ಉದ್ಯೋಗಾಕಾಂಕ್ಷಿಗಳ ಉಚಿತ ನೋಂದಣಿಗಾಗಿ:
http://alvaspragati.com/CandidateRegistrationPage

ಸೂಚನೆ: ಐಟಿಐ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ.
ಆಳ್ವಾಸ್ ಪ್ರಗತಿ 2024ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ ಹಾಗೂ ವಿವರಕ್ಕಾಗಿ ಭೇಟಿ ನೀಡಿ: www.alvaspragati.com

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರು:
1. ಡಾ ಎಂ ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ
2. ಸುಶಾಂತ್ ಅನಿಲ್ ಲೋಬೊ, ಮುಖ್ಯಸ್ಥರು- ತರಬೇತಿ ಮತ್ತು ನಿಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ
3. ಪ್ರಸಾದ್ ಶೆಟ್ಟಿ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಆಳ್ವಾಸ್ ಕಾಲೇಜು
4. ಡಾ ಕುಮಾರಸ್ವಾಮಿ, ಉತ್ಪಾದನಾ ವಲಯದ ಮುಖ್ಯಸ್ಥರು, ಆಳ್ವಾಸ್ ಪ್ರಗತಿ

Ad
Ad
Nk Channel Final 21 09 2023
Ad