ಮಂಗಳೂರು: ಸೈಟ್ ತೋರಿಸುವುದಾಗಿ ಹೇಳಿ ಬಿಲ್ಡರ್ ನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳೆ ನೀಡಿದ ದೂರಿನಡಿ ಮಂಗಳೂರಿನ ಬಿಲ್ಡರ್ ರಶೀದ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದ್ದು, ಅದನ್ನು ಖರೀದಿ ಮಾಡಬಹುದು ರಶೀದ್ ಎಂದಿದ್ದರು. ಅದಕ್ಕೆ ಒಪ್ಪಿ ಅ.21ರಂದು ರಶೀದ್ ಕಾರಿನಲ್ಲಿ ಕುಶಾಲನಗರಕ್ಕೆ ರಶೀದ್ ಜೊತೆ ಮಹಿಳೆ ತೆರಳಿದ್ದರು.
ಅಲ್ಲಿನ ಹೊಟೇಲ್ನಲ್ಲಿ ಇಬ್ಬರಿಗೆ ಪ್ರತ್ಯೇಕ ರೂಮ್ ಬುಕ್ ಮಹಿಳೆ ಮಾಡಿದ್ದರು. ಆಗ ರಶೀದ್ ಒಂದೇ ರೂಮ್ನಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದ್ದ ಆರೋಪ ಕೇಳಿಬಂದಿದೆ. ಅದಕ್ಕೆ ಹೆದರಿ ವಿರಾಜಪೇಟೆಯಲ್ಲಿರುವ ತಂಗಿಯ ಮನೆಯಲ್ಲಿ ಮಹಿಳೆ ಉಳಿದುಕೊಂಡಿದ್ದಳು. ಮರುದಿನ ರಶೀದ್ ಕರೆ ಮಾಡಿ ಸೈಟ್ ನೋಡಲು ಹೋಗುವುದಕ್ಕೆ ಕರೆದಾಗ ಮಹಿಳೆ ಅಲ್ಲಿಗೆ ಹೋಗಿದ್ದರು. ಆಗ ರಶೀದ್ ಅಸಭ್ಯವಾಗಿ ವರ್ತಿಸಿದ್ದಾಗಿ ಮಹಿಳೆ ಆರೋಪ ಮಾಡಿದ್ದಾರೆ.
ಬಳಿಕ ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದಾಗ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಮಾನಭಂಗ ಯತ್ನ ಆರೋಪ ಕೂಡ ಕೇಳಿ ಬಂದಿದೆ. ಈ ವಿಚಾರವನ್ನು ಮಹಿಳೆ ತನ್ನ ಮ್ಯಾನೇಜರ್ಗೆ ತಿಳಿಸಿದಾಗ ರಶೀದ್ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಜೀವಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಮಂಗಳೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.